ಕಾನ್ಪುರ: ದೋಷಪೂರಿತ ಆಕ್ಸಿಮೀಟರ್ ಮತ್ತು ಮೂಢ ನಂಬಿಕೆಯಿಂದಾಗಿ ಮೃತ ಮಗ ಇನ್ನೂ ಜೀವಂತವಾಗಿದ್ದಾನೆ ಎಂದು ನಂಬುವಂತೆ ಮಾಡಿದೆ. ಪರಿಣಾಮ ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಮೃತದೇಹದೊಂದಿಗೆ ಕುಟುಂಬವೊಂದು ವಾಸ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ತಡವಾ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಆದಾಯ ತೆರಿಗೆ ಅಧಿಕಾರಿ ವಿಮಲೇಶ್ ಅವರ ಕುಟುಂಬವು ಅವರ ಮೃತದೇಹದೊಂದಿಗೆ ವಾಸಿಸುತ್ತಿದೆ. ಏಕೆಂದರೆ, ಅವರ ತಾಯಿಯ ಬಲವಾದ ಮೂಢನಂಬಿಕೆಯು ತನ್ನ ಮಗ ಇನ್ನೂ ಜೀವಂತವಾಗಿದ್ದಾನೆ ಎಂಬ ನಂಬಿಕೆಯಿಂದ ಅವರ ಪಾರ್ಥಿವ ಶರೀರವನ್ನು ಸುಡದೇ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಇಡೀ ಕುಟುಂಬವು ತಾಯಿಯನ್ನು ನಂಬಿದೆ. ಹೀಗಾಗಿ, ಅವರು ಮೃತದೇಹವನ್ನು ನೋಡಿಕೊಳ್ಳಲು ಪ್ರಾರಂಭಿಸಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಲಖನ್ ಸಿಂಗ್ ಯಾದವ್ ಮತ್ತು ಅವರ ತಂಡ ಘಟನೆಯ ಬಗ್ಗೆ ತನಿಖೆ ನಡೆಸಿದ ವರದಿಯಲ್ಲಿ ತಿಳಿದುಕೊಂಡಿದೆ.
ವಿಮಲೇಶ್ ಅವರ ತಾಯಿ ರಾಮ್ ದುಲಾರಿ ಅವರ ಮಗ ಇನ್ನೂ ಜೀವಂತವಾಗಿದ್ದಾನೆ ಎಂಬ ನಂಬಿಕೆಗೆ ಮೂಲವಾದ ಕಾರಣ ʻದೋಷಪೂರಿತ ಆಕ್ಸಿಮೀಟರ್ʼ ಎಂದು ವರದಿ ಹೇಳಿದೆ.
ವಿಮಲೇಶ್ ಮರಣದ ನಂತ್ರ, ಅವರ ಕೈನ ಮೊದಲ ಬೆರಳಿಗೆ ಶಾಶ್ವತವಾಗಿ ಆಕ್ಸಿಮೀಟರ್ ಅನ್ನು ಇರಿಸಿದೆ. ಆದರೆ, ಅದು ದೋಷಪೂರಿತವಾಗಿದೆ ಎಂದು ಅವರಿಗೆ ತಿಳಿದೇ ಇಲ್ಲ. ದೋಷಪೂರಿತ ಆಕ್ಸಿಮೀಟರ್ ದೋಷದಿಂದಾಗಿ ವಿಮಲೇಶ್ ಇನ್ನೂ ಜೀವಂತವಾಗಿದೆ ಎಂದು ಕುಟುಂಬ ನಂಬಿದೆ.
ಪೊಲೀಸ್ ತಂಡವು ವಿಮಲೇಶ್ ಅವರ ಮನೆಯನ್ನು, ವಿಶೇಷವಾಗಿ ಅವರ ಶವವನ್ನು ಇರಿಸಿದ್ದ ಕೋಣೆಯನ್ನು ಪರಿಶೀಲಿಸಿದ್ದು, ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ವಿಮಲೇಶ್ ಅವರ ಪತ್ನಿ ಮಿತಾಲಿ ದೀಕ್ಷಿತ್, ʻನನ್ನ ಪತಿ ನಿಧನರಾದರು ಎಂದು ನನಗೆ ತಿಳಿದಿತ್ತು. ಆದರೆ, ಅವರು ಬದುಕಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದರು. ಆದ್ದರಿಂದ ನಾನೂ ಅವರನ್ನು ನಂಬಿದ್ದೇನೆʼ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ವಿಮಲೇಶ್ ಅವರ ಸಹೋದರ ದಿನೇಶ್ ಅವರು ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ನಮಗೆ ಕಿರುಕುಳವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. “ಮೊದಲು ಅಧಿಕಾರಿಗಳು ಯಾವುದೇ ವಿಚಾರಣೆ ಅಥವಾ ತನಿಖೆಯಿಲ್ಲದೆ ಶವವನ್ನು ಬಲವಂತವಾಗಿ ಸುಟ್ಟುಹಾಕಿದರು. ಈಗ ಈ ವಿಚಾರಣೆಯ ಹೆಸರಿನಲ್ಲಿ ನಮಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಾನು ಔಪಚಾರಿಕವಾಗಿ ಸಿಎಂ ಪೋರ್ಟಲ್ನಲ್ಲಿ ದೂರು ಸಲ್ಲಿಸುತ್ತೇನೆ” ಎಂದಿದ್ದಾರೆ.
BIG NEWS: ರ್ಯಾಲಿಗೆ ತಡವಾಗಿ ಆಗಮನ, ರಾಜಸ್ಥಾನದಲ್ಲಿ ಮೈಕ್ ಬಳಸದೇ ಭಾಷಣ ಮಾಡಿದ ʻನಮೋʼ! ಯಾಕೆ ಗೊತ್ತಾ? Video ನೋಡಿ
BIGG NEWS : ರಾಜ್ಯದ ಜನತೆಗೆ ಇಂದಿನಿಂದ `ಕರೆಂಟ್ ಶಾಕ್’ : ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಳ