ಕೈವ್ (ಉಕ್ರೇನ್): ಉಕ್ರೇನ್ನ ಝಪೊರಿಝಿಯಾ ನಗರದಲ್ಲಿ ಶುಕ್ರವಾರ ರಷ್ಯಾದ ಕ್ಷಿಪಣಿಯು ನಾಗರಿಕ ಬೆಂಗಾವಲು ಪಡೆಗೆ ಬಡಿದ ಪರಿಣಾಮ ಮಕ್ಕಳು ಸೇರಿದಂತೆ ಸುಮಾರು 30 ಮಂದಿ ಸಾವನ್ನಪ್ಪಿದ್ದು, 88 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ಜಪೋರಿಝಿಯಾದಿಂದ ಹೊರಬರುವ ಮಾರ್ಗದಲ್ಲಿ ಶತ್ರುಗಳು ನಾಗರಿಕ ಮಾನವೀಯ ಬೆಂಗಾವಲು ಪಡೆಯ ಮೇಲೆ ರಾಕೆಟ್ ದಾಳಿ ನಡೆಸಿದರು” ಎಂದು ಝಪೋರಿಝಿಯಾ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಓಲೆಕ್ಸಾಂಡರ್ ಸ್ಟಾರುಖ್ ಟೆಲಿಗ್ರಾಮ್ನಲ್ಲಿ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ 11 ವರ್ಷದ ಬಾಲಕಿ ಮತ್ತು 14 ವರ್ಷದ ಬಾಲಕನೂ ಕೂಡ ಸೇರಿದ್ದಾನೆ.
Rain In Karnataka : ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ : 12 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ