ಫೋಟೋ: ಧೂಮಪಾನ ಆರೋಗ್ಯಕ್ಕೆ ಹಾನಿಕಾರ
ಕೆಎನ್ಎನ್ಡಿಜಿಟಲ್ಡೆಸ್ಕ್: ನಮ್ಮಲ್ಲಿ ಹೆಚ್ಚಿನವರಿಗೆ ಮುಂಜಾನೆ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವ ಅಭ್ಯಾಸವಿದೆ. ದಿನದ ಆರಂಭದಲ್ಲಿ ಒಂದು ಕಪ್ ಚಹಾ / ಕಾಫಿ ಕುಡಿಯದಿದ್ದರೆ, ಅಂದು ನಾವೇನು ಕಳೆದುಕೊಳ್ಳುವ ಹಾಗೇ ಆಗುತ್ತದೆ.
ಅಂದ ಹಾಗೇ ಸಂಶೋಧನೆಯ ಪ್ರಕಾರ. ಕಾಫಿ ಮತ್ತು ಚಹಾದಲ್ಲಿರುವ ಕೆಫೀನ್ ನಮ್ಮನ್ನು ವ್ಯಸನಿಯನ್ನಾಗಿ ಮಾಡುತ್ತದೆಯಂಥೆ. ಕಚೇರಿ ಅಥವಾ ಮನೆ ಎಲ್ಲೇ ಇರಲಿ, ಸಮಯಕ್ಕೆ ಸರಿಯಾಗಿ ನಿಮ್ಮ ಕೈಯಲ್ಲಿ ಒಂದು ಕಪ್ ಇಲ್ಲದಿದ್ದರೆ, ನೀವು ಹತಾಶರಾಗುತ್ತೀರಿ ಅಲ್ವಾ. ಆದರೆ ಅನೇಕ ಜನರಿಗೆ, ಕಾಪಿ/ಇಲ್ಲವೇ ಟೀ ಜೊತೆಗೆ ಸಿಗರೇಟ್ ಸೇದುವುದು ಕೂಡ ರೂಡಿಯಲ್ಲಿದೆ. ಈ ರೀತಿಯಾಗಿ ಚಹಾ / ಕಾಫಿ ಕುಡಿಯುವುದು ಮತ್ತು ಹೊಗೆಯನ್ನು ಉಸಿರಾಡುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ ಅದ ರಬಗ್ಗೆ ಇಲ್ಲಿದೆ ಮಾಹಿತಿ.
ನಿರ್ಜಲೀಕರಣ : ಚಹಾ / ಕಾಫಿಯೊಂಧಿಗೆ ಧೂಮಪಾನ ಮಾಡುವ ಅಭ್ಯಾಸವನ್ನು ಹೊಂದಿರುವ ಜನರು ಹೆಚ್ಚಾಗಿ ನಿರ್ಜಲೀಕರಣದಿಂದ ಬಳಲುತ್ತಾರೆ. ದೇಹವು ನಿರ್ಜಲೀಕರಣಗೊಂಡರೆ, ತುಟಿಗಳು ಮತ್ತು ಕುತ್ತಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಸಹ ಗೋಚರಿಸುತ್ತವೆ. ಇದಲ್ಲದೆ, ಅತಿಯಾದ ಕಾಫಿ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು.
ನಿದ್ರ ಸಮ್ಯಸೆ: ಹೆಚ್ಚು ಕಾಫಿ ಕುಡಿಯುವ ಅಭ್ಯಾಸದಲ್ಲಿರುವ ಜನರು ಹೆಚ್ಚಾಗಿ ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ವಾಸ್ತವವಾಗಿ.. ಕೆಫೀನ್ ನಮ್ಮ ನಿದ್ರೆಯ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ. ನಿದ್ರಾಹೀನತೆಯ ಸಮಸ್ಯೆ ಪ್ರಾರಂಭವಾದ ನಂತರ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಕಾಡುತ್ತದೆ. ಪ್ರತಿದಿನ ರಾತ್ರಿಯ ಉತ್ತಮ ನಿದ್ರೆಯನ್ನು ಪಡೆಯಲು, ಕಾಫಿಯನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಲು ಮರೆಯಬೇಡಿ.
ಜೀರ್ಣಕ್ರಿಯೆ ಸಮಸ್ಯೆಗಳು : ವೈದ್ಯಕೀಯ ತಜ್ಞರ ಪ್ರಕಾರ. ಚಹಾ ಅಥವಾ ಕಾಫಿಯಲ್ಲಿರುವ ಕೆಫೀನ್ ಜೀರ್ಣಕಾರಿ ಆರೋಗ್ಯವನ್ನು ಹದಗೆಡಿಸುತ್ತದೆ. ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ಕರುಳಿನ ಚಟುವಟಿಕೆಗೆ ಅಡ್ಡಿಪಡಿಸಬಹುದು. ಅತಿಯಾದ ಕಾಫಿ ಸೇವನೆಯು ಹೊಟ್ಟೆ ನೋವಿಗೆ ಕಾರಣವಾಗಬಹುದು.
ಅಧಿಕ ರಕ್ತದೊತ್ತಡ : ಹೆಚ್ಚು ಕಾಫಿ ಸೇವಿಸುವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಧಿಕ ರಕ್ತದೊತ್ತಡವು ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ, ಹೃದಯಾಘಾತ ಸಂಭವಿಸುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡ (ಬಿಪಿ) ಅಥವಾ ಹೃದಯ ಸಂಬಂಧಿತ ಕಾಯಿಲೆಗಳನ್ನು ಹೊಂದಿರುವ ಜನರು ಸೂಕ್ತ ಪ್ರಮಾಣದ ಕಾಫಿಯನ್ನು ತೆಗೆದುಕೊಳ್ಳಲು ಮರೆಯಬಾರದು.