*ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ವಸಂತ್ ಬಿ ಈಶ್ವರಗೆರೆ
ಬೆಂಗಳೂರು: ‘ಮತಾಂತರ ನಿಷೇಧ’ ಕಾಯ್ದೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್, ನೀಡಲಾಗಿದೆ ಹಾಗಾದ್ರೇ ಕಾಯ್ದೆಯಲ್ಲಿ ಇರೋದು ಏನು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2022 ಇದಕ್ಕೆ 2022 ರ ಸೆಪ್ಟೆಂಬರ್ ತಿಂಗಳ 28ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2022ರ ಕರ್ನಾಟಕ ಅಧಿನಿಯಮ ಸಂಖ್ಯೆ : 25 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ IV) ಪುಕಟಿಸಬೇಕೆಂದು ಆದೇಶಿಸಲಾಗಿದೆ. 2022ರ ಕರ್ನಾಟಕ ಅಧಿನಿಯಮ ಸಂಖ್ಯೆ: 25 (2022 ರ ಸೆಪ್ಟೆಂಬರ್ ತಿಂಗಳ 30ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪಕಟವಾಗಿದೆ) ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ, 2022 (2022 ರ ಸೆಪ್ಟೆಂಬರ್ ತಿಂಗಳ 28ನೇ ದಿನಾಂಕದಂದು ರಾಜ್ಯ ಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ.
ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪುಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಒಂದು ಅಧಿನಿಯಮ. ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರವಾಗಿ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ; ಇದು ಭಾರತ ಗಣರಾಜ್ಯದ ಎಪ್ಪತ್ತೂರನೇ ವರ್ಷದಲ್ಲಿ ಕರ್ನಾಟಕ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ.-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ, 2022 ಎಂದು ಕರೆಯತಕ್ಕದ್ದು.
(2) ಇದು 2022ರ ಮೇ 17ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು. 2. ಪರಿಭಾಷೆಗಳು.- (1) ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಆಮಿಷ” ಎಂಬುವುದು ಈ ಮುಂದಿನ ಯಾವುದೇ ರೀತಿಯ ಪ್ರಲೋಭನೆ ಒಡ್ಡುವುದನ್ನು ಒಳಗೊಳ್ಳುತ್ತದೆ, (i) ನಗದು ರೂಪದಲ್ಲಾಗಲೀ ಅಥವಾ ವಸ್ತುವಿನ ರೂಪದಲ್ಲಾಗಲೀ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ಭೌತಿಕ ಪ್ರಯೋಜನ
(ii) ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ; ಅಥವಾ
(ii) ಮದುವೆಯಾಗುವುದಾಗಿ ವಾಗ್ದಾನ ಮಾಡುವುದು; ಅಥವಾ
(iv) ಉತ್ತಮ ಜೀವನ ಶೈಲಿ, ದೈವಿಕ ಅಸಂತೋಷ ಅಥವಾ ಅನ್ಯಥಾ; ಅಥವಾ
(v) ಯಾವುದೇ ಧರ್ಮದ ಅವಿಭಾಜ್ಯ ಅಂಗವಾಗಿರುವ ಪದ್ಧತಿಗಳು, ಸಂಪ್ರದಾಯಗಳು ಅಥವಾ ಆಚರಣೆಗಳನ್ನು ಇನ್ನೊಂದು ಧರ್ಮಕ್ಕೆ ಎದುರಾಗಿ ಧಕ್ಕೆಯಾಗುವ ರೀತಿಯಲ್ಲಿ ಚಿತ್ರಿಸುವುದು; ಅಥವಾ
(vi) ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವಿಕರಿಸುವುದು:
(ಬಿ) “ಒತ್ತಾಯ” ಎಂದರೆ ಯಾರೇ ವ್ಯಕ್ತಿಯನ್ನು ಶಾರೀರಿಕ ಹಾನಿ ಉಂಟು ಮಾಡುವ ಅಥವಾ ಅದರ ಬೆದರಿಕೆ ಒಡ್ಡುವ ಮಾನಸಿಕ ಒತ್ತಡ ಅಥವಾ ದೈಹಿಕ ಬಲಪಯೋಗ ಬಳಸಿ ಆತನ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸುವುದು:
(ಸಿ) “ಮತಾಂತರ” ಎಂದರೆ ಯಾರೇ ವ್ಯಕ್ತಿಯು ತನ್ನ ಸ್ವಂತ ಧರ್ಮವನ್ನು ತ್ಯಜಿಸಿ ಮತ್ತೊಂದು ಧರ್ಮವನ್ನು ಅಳವಡಿಸಿಕೊಳ್ಳುವುದು;
(ಡಿ) “ಬಲವಂತ” ಎಂಬುದು ಮತಾಂತರಗೊಂಡ ಅಥವಾ ಮತಾಂತರಗೊಳ್ಳುವಂತೆ ಕೋರಲಾದ ವ್ಯಕ್ತಿಯ ಮೇಲೆ ಒತ್ತಾಯ ಪ್ರದರ್ಶಿಸುವುದು ಅಥವಾ ಅಂಥ ವ್ಯಕ್ತಿ ಅಥವಾ ಇತರ ಯಾರೇ ವ್ಯಕ್ತಿ ಅಥವಾ ಸ್ವತ್ತಿಗೆ ಯಾವುದೇ ಬಗೆಯ ಹಾನಿ ಉಂಟು ಮಾಡುವ ಬೆದರಿಕೆಯನ್ನು ಒಡ್ಡುವುದೂ ಒಳಗೊಂಡಿರುತ್ತದೆ;
(ಇ) “ವಂಚನೆ” ಎಂಬುದು ಸುಳ್ಳು ಹೆಸರು, ಅಡ್ಡ ಹೆಸರು, ಧಾರ್ಮಿಕ ಸಂಕೇತ ಅಥವಾ ಅನ್ಯಥಾ ವಿಧಾನಗಳ ಮೂಲಕ ಯಾವುದೇ ರೀತಿಯಲ್ಲಿ ಮತ್ತೊಬ್ಬ ವ್ಯಕ್ತಿಯಂತೆ ನಟಿಸುವುದನ್ನು ಒಳಗೊಳ್ಳುತ್ತದೆ;
(ಎಫ್) “ನಮೂನೆ” ಎಂದರೆ, ಈ ಅಧಿನಿಯಮಿಕ್ಕೆ ಅನುಬಂಧಿಸಲಾದ ನಮೂನೆ.
(ಜಿ) “ಸಂಸ್ಥೆಗಳು”ಎಂದರೆ ಎಲ್ಲಾ ಕಾನೂನು ಸಮ್ಮತ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಆಸ್ಪತ್ರೆಗಳು, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಅಂಥ ಇತರ ಸಂಘಗಳನ್ನು ಒಳಗೊಳ್ಳುತ್ತದೆ.
(ಹೆಚ್) “ಸಾಮೂಹಿಕ ಮತಾಂತರ” ಎಂದರೆ, ಇಬ್ಬರು ಅಥವಾ ಹೆಚ್ಚಿನ ಜನರು ಮತಾಂತರಗೊಳ್ಳುವುದು;
(ಐ) “ಅಪ್ರಾಪ್ತ” ಎಂದರೆ ಹದಿನೆಂಟು ವರ್ಷಗಳ ವಯಸ್ಸಿನೊಳಗಿರುವ ವ್ಯಕ್ತಿ;
(ಜೆ) “ಮೂಲ ಧರ್ಮ” ಎಂದರೆ ವ್ಯಕ್ತಿಯ ಮತಾಂತರಕ್ಕೆ ಮೊದಲಿನ ಧರ್ಮ;
(ಕೆ) “ಧರ್ಮ” ಎಂದರೆ, ಭಾರತದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಪಚಲಿತದಲ್ಲಿರುವಂತೆ ಪೂಜಾ ವಿಧಾನ, ಶ್ರದ್ಧೆ, ನಂಬಿಕೆ, ಆರಾಧನೆ ಅಥವಾ ಜೀವನ ಶೈಲಿಯ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅಥವಾ ಪದ್ಧತಿಯ ಮೇರೆಗೆ ಪರಿಭಾಷಿಸಿರುವ ಯಾವುದೇ ಸಂಘಟಿತ ವ್ಯವಸ್ಥೆ;
(ಎಲ್) “ಮತಾಂತರ ಮಾಡುವವನು” ಎಂದರೆ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಯಾವುದೇ ಮತಾಂತರದ ಕಾರ್ಯವನ್ನು ನಿರ್ವಹಿಸುವ ಹಾಗೂ ಪಾದ್ರಿ, ಅರ್ಚಕ, ಪುರೋಹಿತ, ಪಂಡಿತ, ಮೌಲ್ವಿ ಅಥವಾ ಮುಲ್ಲಾ ಮೊದಲಾದಂಥ ಯಾವುದೇ ಹೆಸರಿನಿಂದ ಕರೆಯಲ್ಪಡುವ ಯಾವುದೇ ಧರ್ಮದ ವ್ಯಕ್ತಿ ಮತ್ತು
(ಎಂ) “ಅನುಚಿತ ಪ್ರಭಾವ” ಎಂದರೆ, ಒಬ್ಬ ವ್ಯಕ್ತಿಯು ತನ್ನ ಅಧಿಕಾರ ಅಥವಾ ಪ್ರಭಾವವನ್ನು, ಅಂಥ ಪ್ರಭಾವವನ್ನು ಚಲಾಯಿಸುವ ವ್ಯಕ್ತಿಯ ಇಚ್ಛೆಗೆ ಅನುಸಾರವಾಗಿ ಕಾರ್ಯನಿರ್ವಹಿಸುವಂತೆ ಇನ್ನೊಬ್ಬರನ್ನು ಮನಗಾಣಿಸುವ ಸಲುವಾಗಿ, ಇನ್ನೊಬ್ಬ ವ್ಯಕ್ತಿಯ ಮೇಲೆ ವಿವೇಚನಾರಹಿತವಾಗಿ ಬಳಸುವುದು;
(2) ಈ ಅಧಿನಿಯಮದಲ್ಲಿ ಬಳಸಲಾದ ಆದರೆ ಪರಿಭಾಷಿಸಿಲ್ಲದ ಇತರ ಪದಗಳು ಮತ್ತು ಪದಾವಳಿಗಳು ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1899ರಲ್ಲಿ ( 1899ರ ಕರ್ನಾಟಕ ಅಧಿನಿಯಮ 3) ಅವುಗಳಿಗೆ ವಹಿಸಿದ ಅರ್ಥವನ್ನೇ ಹೊಂದಿರತಕ್ಕದ್ದು.
3. ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡುವ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮಾಡುವ ಮತಾಂತರದ ನಿಷೇಧ.- ಯಾರೇ ವ್ಯಕ್ತಿಯು, ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷಒಡ್ಡುವ ಕ್ರಮಗಳ ಬಳಕೆ ಅಥವಾ ಪದ್ಧತಿಯ ಮೂಲಕ ಅಥವಾ ಯಾವುದೇ ವಂಚನೆ ವಿಧಾನಗಳ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಇತರೆ ಯಾರೇ ವ್ಯಕ್ತಿಯನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ನೇರವಾಗಿಯಾಗಲಿ ಅಥವಾ ಬೇರೆ ರೀತಿಯಿಂದಾಗಲಿ ಮತಾಂತರ ಮಾಡತಕ್ಕದ್ದಲ್ಲ ಅಥವಾ ಮತಾಂತರ ಮಾಡಲು ಪ್ರಯತ್ನಿಸತಕ್ಕದ್ದಲ್ಲ ಇಲ್ಲವೇ ಯಾರೇ ವ್ಯಕ್ತಿಯನ್ನು ಅಂಥ ಮತಾಂತರಕ್ಕೆ ದುಷ್ಪರಿಸತಕ್ಕದ್ದಲ್ಲ ಅಥವಾ ಪಿತೂರಿ ಮಾಡತಕ್ಕದ್ದಲ್ಲ;
ಪರಂತು, ಯಾರೇ ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡಲ್ಲಿ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಭಾವಿಸತಕ್ಕದ್ದಲ್ಲ. 4. ದೂರನ್ನು ದಾಖಲಿಸಲು ಸಕ್ಷಮನಾದ ವ್ಯಕ್ತಿ.. ಯಾರೇ ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು, ಸೋದರ, ಸೋದರಿ ಅಥವಾ ಆತನಿಗೆ ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿಯಾದ ಅಥವಾ ಯಾವುದೇ ರೂಪದಲ್ಲಿ ಸಹವರ್ತಿ ಅಥವಾ ಸಹೋದ್ಯೋಗಿಯಾದ ಇತರ ಯಾರೇ ವ್ಯಕ್ತಿಯು 3ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವಂಥ ಮತಾಂತರದ ಬಗ್ಗೆ ದೂರನ್ನು ದಾಖಲು ಮಾಡಬಹುದು.
5. 3ನೇ ಪ್ರಕರಣದ ಉಪಬಂಧಗಳ ಉಲ್ಲಂಘನೆಗಾಗಿ ದಂಡನೆ.- (1) 3ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವಂತಹ ಯಾರೇ ವ್ಯಕ್ತಿಯು, ಯಾವುದೇ ಸಿವಿಲ್ ಹೊಣೆಗಾರಿಕೆಗೆ ಬಾಧಕವಾಗದಂತೆ, ಮೂರು ವರ್ಷಗಳ ಅವಧಿಯ ಆದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರವಾಸದಿಂದ, ಇವೆರಡರಲ್ಲಿ ಯಾವುದಾದರೂ ಒಂದು ಬಗೆಯ ಕಾರಾವಾಸದಿಂದ ದಂಡಿತನಾಗತಕ್ಕದ್ದು ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ಜುಲ್ಮಾನೆಗೂ ಹೊಣೆಗಾರನಾಗಿರತಕ್ಕದ್ದು; ಪರಂತು, ಅಪ್ರಾಪ್ತ ಅಥವಾ ಅಸ್ವಸ್ಥಚಿತ್ರ ವ್ಯಕ್ತಿ ಅಥವಾ ಮಹಿಳೆ ಅಥವಾ ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಕ್ಕೆ ಸೇರಿದ ವ್ಯಕ್ತಿಯ ಸಂದರ್ಭದಲ್ಲಿ 3ನೇ ಪ್ರಕರಣದ ಉಪಬಂಧಗಳನ್ನು ಯಾರಾದರೂ ಉಲ್ಲಂಘಿಸಿದರೆ ಅವರು ಮೂರು ವರ್ಷಗಳ ಅವಧಿಯ ಆದರೆ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರವಾಸದಿಂದ, ಇವೆರಡರಲ್ಲಿ ಯಾವುದಾದರೂ ಒಂದು ಬಗೆಯ ಕಾರಾವಾಸದಿಂದ ದಂಡಿತರಾಗತಕ್ಕದ್ದು ಹಾಗೂ ಐವತ್ತು ಸಾವಿರ ರೂಪಾಯಿಗಳ ಜುಲ್ಮಾನೆಗೂ ಸಹ ಗುರಿಯಾಗತಕ್ಕದ್ದು; ಮತ್ತು ಪರಂತು, ಸಾಮೂಹಿಕ ಮತಾಂತರದ ಸಂದರ್ಭದಲ್ಲಿ 3ನೇ ಪ್ರಕರಣದ ಉಪಬಂಧಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅವರು ಮೂರು ವರ್ಷಗಳ ಅವಧಿಯ ಆದರೆ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರವಾಸದಿಂದ, ಇವೆರಡರಲ್ಲಿ ಯಾವುದಾದರೂ ಒಂದು ಬಗೆಯ ಕಾರಾವಾಸದಿಂದ ದಂಡಿತರಾಗತಕ್ಕದ್ದು ಹಾಗೂ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಗೂ ಸಹ ಗುರಿಯಾಗತಕ್ಕದ್ದು,
(2) ಸದರಿ ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಯುಕ್ತ ಪರಿಹಾರವನ್ನು ಸಹ ನ್ಯಾಯಾಲಯವು ಮಂಜೂರು ಮಾಡತಕ್ಕದ್ದು ಹಾಗೂ ಅದು ಜುಲ್ಮಾನೆಗೆ ಹೆಚ್ಚುವರಿಯಾಗಿರತಕ್ಕದ್ದು.
(3) ಈ ಅಧಿನಿಯಮದ ಅಡಿಯಲ್ಲಿನ ಅಪರಾಧಕ್ಕಾಗಿ ಹಿಂದೆಯೇ ಅಪರಾಧ ನಿರ್ಣಿತನಾದ ಯಾರೇ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿನ ದಂಡನೀಯ ಅಪರಾಧಕ್ಕೆ ಮತ್ತೊಮ್ಮೆ ಅಪರಾಧ ನಿರ್ಣಿತನಾದರೆ ಆತನು ಐದು ವರ್ಷಗಳಿಗೆ ಕಡಿಮೆಯಿರದ ಅವಧಿಗೆ ಕಾರಾವಾಸದಿಂದ, ಇವೆರಡರಲ್ಲಿ ಯಾವುದಾದರೂ ಒಂದು ಬಗೆಯ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಎರಡು ಲಕ್ಷ ರೂಪಾಯಿಗಳ ಜುಲ್ಮಾನೆಗೂ ಸಹ ಹೊಣೆಗಾರನಾಗಿರತಕ್ಕದ್ದು.
6. ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆಯನ್ನು ಅಸಿಂಧುವೆಂದು ಘೋಷಿಸುವುದು. ಒಂದು ಧರ್ಮದ ಪುರುಷನು ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಮದುವೆಗೆ ಮುಂಚೆ ಅಥವಾ ನಂತರ ಆತನೇ ಮತಾಂತರಗೊಳ್ಳುವ ಮೂಲಕ ಅಥವಾ ಮದುವೆಗೆ ಮುಂಚೆ ಅಥವಾ ನಂತರ ಮಹಿಳೆಯನ್ನು ಮತಾಂತರಗೊಳಿಸುವ ಮೂಲಕ ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶದಿಂದ ನಡೆದ ಯಾವುದೇ ಮದುವೆಯನ್ನು ಕೌಟುಂಬಿಕ ನ್ಯಾಯಾಲಯವು ಅಕೃತ ಮತ್ತು ಶೂನ್ಯವೆಂದು ಘೋಷಿಸತಕ್ಕದ್ದು ಅಥವಾಕೌಟುಂಬಿಕ ನ್ಯಾಯಾಲಯವು ಸ್ಥಾಪಿಸಿರದಿದ್ದಲ್ಲಿ,
ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯವು ಮದುವೆಯ ಇಬ್ಬರೂ ಪಕ್ಷಕಾರರು ಮತ್ತೊಬ್ಬ ಪಕ್ಷಕಾರರ ಮೇಲೆ ಸಲ್ಲಿಸಿದ ಅರ್ಜಿಯ ಮೇರೆಗೆ ಅಂಥ ಪ್ರಕರಣವನ್ನು ವಿಚಾರಣೆ ನಡೆಸತಕ್ಕದ್ದು; ಪರಂತು, 8 ಮತ್ತು 9ನೇ ಪ್ರಕರಣದ ಎಲ್ಲಾ ಉಪಬಂಧಗಳು ವಿಧಿವತ್ತಾಗಿ ನೆರವೇರಿಸುವ
ಅಂಥ ಮದುವೆಗಳಿಗೆ ಅನ್ವಯವಾಗತಕ್ಕದ್ದು.
7. ಅಪರಾಧವು ಜಾಮೀನು ರಹಿತ ಮತ್ತು ಸಂಜೆಯವಾಗಿರುವುದು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973ರಲ್ಲಿ (1974ರ ಕೇಂದ್ರ ಅಧಿನಿಯಮ 2) ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ ಅಡಿಯಲ್ಲಿ ಎಸಗಲಾದ ಪ್ರತಿಯೊಂದು ಅಪರಾಧವು ಸಂಜೆಯವಾಗಿರತಕ್ಕದ್ದು ಮತ್ತು ಜಾಮೀನು ರಹಿತವಾಗಿರತಕ್ಕದ್ದು.
8. ಧರ್ಮದ ಮತಾಂತರಕ್ಕೆ ಮೊದಲು ಘೋಷಣೆ ಹಾಗೂ ಮತಾಂತರದ ಕುರಿತು
ಪೂರ್ವ ವರದಿ.- (1) ತನ್ನ ಧರ್ಮದಿಂದ ಮತಾಂತರಗೊಳ್ಳಲು ಇಚ್ಚಿಸುವ ಯಾರೇ ವ್ಯಕ್ತಿಯು, ಕನಿಷ್ಠ ಮೂವತ್ತು ದಿವಸಗಳಿಗೆ ಮುಂಚಿತವಾಗಿ ರಾಜ್ಯದೊಳಗಿನ ತನ್ನ ನಿವಾಸದ ಜಿಲ್ಲೆಯ ಅಥವಾ ಜನ್ಮ ಸ್ಥಳದ ಜಿಲ್ಲಾ ದಂಡಾಧಿಕಾರಿಗೆ ಅಥವಾ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಯವರು ವಿಶೇಷವಾಗಿ ಅಧಿಕಾರ ನೀಡಿದ ಜಿಲ್ಲಾ ಅಪರ ದಂಡಾಧಿಕಾರಿ ಇವರಿಗೆ ನಮೂನೆ | ರಲ್ಲಿ ಘೋಷಣೆಯನ್ನು ನೀಡತಕ್ಕದ್ದು.
(2) ಯಾರೇ ವ್ಯಕ್ತಿಯನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವುದಕ್ಕಾಗಿ ಮತಾಂತರದ ವಿಧಿವಿಧಾನಗಳನ್ನು ನೆರವೇರಿಸುವ ಧಾರ್ಮಿಕ ಮತಾಂತರ ಮಾಡುವವನು ಅಂಥ ಉದ್ದೇಶಿತ ಮತಾಂತರ ಕುರಿತು ಅಂಥ ಉದ್ದೇಶಿತ ಮತಾಂತರ ಮಾಡುವವನು ಯಾವ ಜಿಲ್ಲೆಗೆ ಸೇರಿರುವನೋ ಆ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗೆ ಅಥವಾ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಯವರು ವಿಶೇಷವಾಗಿ ಅಧಿಕಾರ ನೀಡಿದ ಅಪರ ಜಿಲ್ಲಾ ದಂಡಾಧಿಕಾರಿ ಇವರಿಗೆ ನಮೂನೆ | ರಲ್ಲಿ ಮೂವತ್ತು ದಿನಗಳ ಮುಂಗಡ ನೋಟೀಸನ್ನು ನೀಡತಕ್ಕದ್ದು.
(3) ಜಿಲ್ಲಾ ದಂಡಾಧಿಕಾರಿಯು, (1) ಮತ್ತು (2) ನೇ ಉಪ-ಪಕರಣದ ಅಡಿಯಲ್ಲಿ ಮಾಹಿತಿಯನ್ನು ಸ್ವೀಕರಿಸಿದ ತರುವಾಯ, ಜಿಲ್ಲಾ ದಂಡಾಧಿಕಾರಿಯವರ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ತಹಶೀಲ್ದಾರ್ರವರ ಕಛೇರಿಯಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿ ಉದ್ದೇಶಿತ ಧಾರ್ಮಿಕ ಮತಾಂತರದ ಬಗ್ಗೆ ಅಧಿಸೂಚಿಸತಕ್ಕದ್ದು. ಮೂವತ್ತು ದಿನಗಳ ಒಳಗಾಗಿ ಯಾವುದಾದರೂ ಆಕ್ಷೇಪಣೆಗಳು ಬಂದರೆ, ಪ್ರಸ್ತಾಪಿತ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣದ ಬಗ್ಗೆ ಕಂದಾಯ ಅಥವಾ ಸಮಾಜ ಕಲ್ಯಾಣ ಅಧಿಕಾರಿಗಳ ಮೂಲಕ ವಿಚಾರಣೆಯನ್ನು ನಡೆಸತಕ್ಕದ್ದು.
(4) ಜಿಲ್ಲಾ ದಂಡಾಧಿಕಾರಿಯು, ಸದರಿ ವಿಚಾರಣೆಯ ಆಧಾರದ ಮೇಲೆ ಈ ಅಧಿನಿಯಮದ ಅಡಿ ಅಪರಾಧವನ್ನು ಎಸಗಿರುವರೆಂಬ ತೀರ್ಮಾನಕ್ಕೆ ಬಂದರೆ, ಅವರು 3ನೇ ಪ್ರಕರಣದ ಉಪಬಂಧಗಳ ಉಲ್ಲಂಘನೆಗಾಗಿ ಕ್ರಿಮಿನಲ್ ಕ್ರಮವನ್ನು ಹೂಡುವಂತೆ ಸಂಬಂಧಪಟ್ಟ ಪೊಲೀಸ್ ಪ್ರಾಧಿಕಾರಿಗಳಿಗೆ ಸೂಚಿಸತಕ್ಕದ್ದು.
(5) (1)ನೇ ಉಪ-ಪಕರಣ ಅಥವಾ (2)ನೇ ಉಪ-ಪ್ರಕರಣವನ್ನು ಉಲ್ಲಂಘಿಸಿ ಮಾಡುವ ಯಾವುದೇ ಮತಾಂತರವು ಕಾನೂನು ಬಾಹಿರ ಮತ್ತು ಅಸಿಂಧುವಾಗಿರುತ್ತದೆ.
(6) (1)ನೇ ಉಪ-ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ಒಂದು ವರ್ಷಕ್ಕೆ ಕಡಿಮೆಯಿಲ್ಲದ ಆದರೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದಿಂದ, ಇವೆರಡರಲ್ಲಿ ಯಾವುದಾದರೂ ಒಂದು ಬಗೆಯ ಕಾರಾವಾಸದಿಂದ ದಂಡಿತನಾಗತಕ್ಕದ್ದು ಹಾಗೂ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಜುಲ್ಮಾನೆಗೆ ಹೊಣೆಗಾರನಾಗತಕ್ಕದ್ದು.
(7) (2)ನೇ ಉಪ-ಪಕರಣದ ಉಪ-ಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ಒಂದು ವರ್ಷಕ್ಕೆ ಕಡಿಮೆಯಲ್ಲದ ಆದರೆ ಐದು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದಿಂದ, ಇವೆರಡರಲ್ಲಿ ಯಾವುದಾದರೂ ಒಂದು ಬಗೆಯ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಕಡಿಮೆಯಲ್ಲದ ಜುಲ್ಮಾನೆಗೆ ಹೊಣೆಗಾರನಾಗತಕ್ಕದ್ದು.
9. ಧಾಮಿ ಕ ಮತಾಂತರೋತ್ತರ ಘೋಷಣೆ.- (1) ಮತಾಂತರಗೊಂಡ ವ್ಯಕ್ತಿಯು ಮತಾಂತರದ ದಿನಾಂಕದಿಂದ ಮೂವತ್ತು ದಿನದೊಳಗಾಗಿ ನಮೂನೆ IIIರಲ್ಲಿ ಆತನು ಮತಾಂತರದ ದಿನಾಂಕಕ್ಕೆ ಪೂರ್ವದಲ್ಲಿ ವಾಸವಾಗಿರುವ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗೆ ಅಥವಾ ಜಿಲ್ಲಾ ದಂಡಾಧಿಕಾರಿಯು ಈ ಬಗ್ಗೆ ವಿಶೇಷವಾಗಿ ಅಧಿಕೃತಗೊಳಿಸಿದ ಅಪರ ಜಿಲ್ಲಾ ದಂಡಾಧಿಕಾರಿಗೆ ಘೋಷಣೆಯನ್ನು ಕಳುಹಿಸತಕ್ಕದ್ದು.
(2) ಜಿಲ್ಲಾ ದಂಡಾಧಿಕಾರಿಯು, ಜಿಲ್ಲಾ ದಂಡಾಧಿಕಾರಿಯ ಕಛೇರಿಯ ಸೂಚನಾ ಫಲಕದ ಮೇಲೆ ಹಾಗೂ ತಹಶೀಲ್ದಾರ ಕಛೇರಿಯ ಸೂಚನಾ ಫಲಕದ ಮೇಲೆ ಧಾರ್ಮಿಕ ಮತಾಂತರದ ಬಗ್ಗೆ ಅಧಿಸೂಚಿಸತಕ್ಕದ್ದು ಮತ್ತು ಈ ಮುಂಚೆ 8ನೇ ಪುಕರಣದ ಅಡಿಯಲ್ಲಿ ಯಾವುದೇ ಆಕ್ಷೇಪಣೆಗಳನ್ನು ಕರೆಯದಿದ್ದ ಸಂದರ್ಭದಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸುವುದು.
(3) ಸದರಿ ಘೋಷಣೆಯು,ಅಗತ್ಯ ವಿವರಗಳನ್ನು ಎಂದರೆ ಜನ್ಮ ದಿನಾಂಕ, ಖಾಯಂ ವಿಳಾಸ, ಪ್ರಸ್ತುತ ವಾಸವಿರುವ ಸ್ಥಳ, ತಂದೆ/ಗಂಡನ ಹೆಸರು, ಮೂಲತವಾಗಿ ಸೇರಿರುವ ಧರ್ಮ ಮತ್ತು ಆತನು ಮತಾಂತರಗೊಂಡ ಧರ್ಮ, ಮತಾಂತರದ ದಿನಾಂಕ ಮತ್ತು ಸ್ಥಳ ಹಾಗೂ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ನ ಪ್ರತಿಯೊಂದಿಗೆ ಮತಾಂತರಕ್ಕೊಳಗಾದ ಕಾರ್ಯವಿಧಾನದ ಸ್ವರೂಪದಂಥಹ ಮತಾಂತರ ವಿವರಗಳನ್ನು ಒಳಗೊಂಡಿರತಕ್ಕದ್ದು. ಪ್ರಭಾವದಲ್ಲಿರುವ ವ್ಯಕ್ತಿ ಅಥವಾ ವ್ಯಕ್ತಿಗಳು, 5ನೇ ಪ್ರಕರಣದ ಅಡಿಯಲ್ಲಿ ಉಪಬಂಧಿಸಲಾದಂತೆ ದಂಡನೆಗೆ ಗುರಿಯಾಗತಕ್ಕದ್ದು
(2) ರಾಜ್ಯ ಸರ್ಕಾರವು ಈ ಅಧಿನಿಯಮದ ಉಪಬಂಧಗಳನ್ನು ಉಲ್ಲಂಘಿಸುವಂಥ ಸಂಸ್ಥೆಗೆ ಯಾವುದೇ ಹಣಕಾಸಿನ ನೆರವು ಅಥವಾ ಅನುದಾನವನ್ನು ಒದಗಿಸತಕ್ಕದ್ದಲ್ಲ.
11. ಅಪರಾಧದ ಪಕ್ಷಕಾರರು. ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಅಪರಾಧ ಎಸಗಿದ್ದಲ್ಲಿ.
(i)ವಾಸ್ತವಿಕವಾಗಿ ಅಪರಾಧವನ್ನಾಗುವಂಥ ಕೃತ್ಯವನ್ನು ಮಾಡುವ ; ಮತ್ತು
(ii) ಅಪರಾಧವನ್ನು ಎಸಗುವಲ್ಲಿ ಮತ್ತೊಬ್ಬ ವ್ಯಕ್ತಿಗೆ ನೆರವು ನೀಡುವ ಅಥವಾ
ದುಷ್ಕೃರೇಪಿಸುವ;
-ಪ್ರತಿಯೊಬ್ಬ ವ್ಯಕ್ತಿಯು ಅಪರಾಧವನ್ನು ಎಸಗುವಲ್ಲಿ ಭಾಗವಹಿಸಿದ್ದರೆಂದು ಭಾವಿಸತಕ್ಕದ್ದು ಮತ್ತು ಆತನನ್ನು ಅಪರಾಧದ ದೋಷಿಯಾಗಿಸತಕ್ಕದ್ದು ಮತ್ತು ಆತನು ವಾಸ್ತವಿಕವಾಗಿ ಸದರಿ ಅಪರಾಧವನ್ನು ಎಸಗಿದ್ದಾರೆ ಹೇಗೋ ಹಾಗೆ ಆರೋಪಿಯನ್ನಾಗಿಸತಕ್ಕದ್ದು.
12. ರುಜುವಾತಿನ ಭಾರ.- ಮತಾಂತರವನ್ನು ತಪ್ಪು ನಿರೂಪಣೆ, ಒತ್ತಾಯ, ಅನುಚಿತ ಪ್ರಭಾವ, ಬಲವಂತ, ಪುಲೋಭನೆಯ ಮೂಲಕ ಅಥವಾ ಯಾವುದೇ ವಂಚನೆಯ ಸಾಧನಗಳ ಮೂಲಕ ಅಥವಾ ವಿವಾಹದ ಮೂಲಕ ಮಾಡಲಾಗಿಲ್ಲವೆಂಬುದನ್ನು ರುಜುವಾತುಪಡಿಸುವ ಹೊಣೆಯು, ಮತಾಂತರವನ್ನು ಮಾಡಿದ ವ್ಯಕ್ತಿಯ ಮೇಲೆ ಅಥವಾ ಯಾವೊಬ್ಬ ವ್ಯಕ್ತಿಯು ಅಂಥ ಮತಾಂತರಕ್ಕೆ ನೆರವು ನೀಡಿರುವನೊ ಅಥವಾ ದುಷ್ಪರೇಪಿಸಿರುವನೋ ಆ ವ್ಯಕ್ತಿಯ ಮೇಲೆ ಇರತಕ್ಕದ್ದು.
13. ನಮೂನೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆ ಮೂಲಕ ನಮೂನೆಗಳಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಮೂದುಗಳನ್ನು ಸೇರಿಸಬಹುದು, ವ್ಯತ್ಯಾಸಗೊಳಿಸಬಹುದು ಅಥವಾ ಬಿಟ್ಟು ಬಿಡಬಹುದು
14.ತೊಂದರೆಗಳ ನಿವಾರಣೆ.. (1) ಈ ಅಧಿನಿಯಮದ ಉಪಬಂಧಗಳನ್ನೂ ಜಾರಿಗೊಳಿಸುವಲ್ಲಿ ಯಾವುದೇ ತೊಂದರೆಯು ಉದ್ಭವಿಸಿದರೆ ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಥವಾ ಆದೇಶದ ಮೂಲಕ ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗದಂಥ ತೊಂದರೆಗಳ ನಿವಾರಣೆಗೆ ಅಗತ್ಯವೆಂದು ಅಥವಾ ವಿಹಿತವೆಂದು ಕಂಡುಬರುವಂಥ ಉಪಬಂಧಗಳನ್ನು ಕಲ್ಪಿಸಬಹುದು: ಪರಂತು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯವಾದ ತರುವಾಯ ಈ ಪ್ರಕರಣದಡಿಯಲ್ಲಿ ಅಂಥ ಯಾವುದೇ ಅಧಿಸೂಚನೆಯನ್ನು ಅಥವಾ ಆದೇಶವನ್ನು ಮಾಡತಕ್ಕದ್ದಲ್ಲ.
(2) (1)ನೇ ಉಪಪಕರಣದ ಅಡಿಯಲ್ಲಿ ಮಾಡಲಾದ ಪ್ರತಿಯೊಂದು ಆದೇಶವನ್ನು ಅದನ್ನು ಮಾಡಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸತಕ್ಕದ್ದು.