ನವದೆಹಲಿ : ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದು, ಜುಲೈನಲ್ಲಿ ಘೋಷಿಸಲಾದ ವಿಜೇತರಿಗೆ ಅಧ್ಯಕ್ಷೆ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
📡LIVE NOW📡
President of India, Smt. Droupadi Murmu presents the 68th #NationalFilmAwards at Vigyan Bhawan, New Delhi.@ianuragthakur @Murugan_MoS @PIB_India @DDNewslive @airnewsalerts @AmritMahotsav @official_dff @FTIIOfficial https://t.co/Y8HZiJVKL2
— Ministry of Information and Broadcasting (@MIB_India) September 30, 2022
ಖ್ಯಾತ ನಟಿ ಆಶಾ ಪರೇಖ್ ಅವ್ರು ಭಾರತೀಯ ಚಿತ್ರರಂಗಕ್ಕೆ ನೀಡಿದ ಅನುಕರಣೀಯ ಜೀವಮಾನದ ಕೊಡುಗೆಗಾಗಿ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು. ಇನ್ನು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ತಮಿಳು ಚಿತ್ರ ಸೂರರೈ ಪೊಟ್ರುಗೆ ಲಭಿಸಿದೆ.
ಇನ್ನು ಬಾಲಿವುಡ್ ನಟ ಅಜಯ್ ದೇವಗನ್, ಕಾಲಿವುಡ್ ನಟ ಸೂರ್ಯ ಅವ್ರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಇನ್ನು ಇದೇ ವೇಳೆ ಸಂಗೀತ ಸಂಯೋಜಕ-ಚಲನಚಿತ್ರ ನಿರ್ಮಾಪಕ ವಿಶಾಲ್ ಭಾರದ್ವಾಜ್ ಅವರು ‘1232 ಕೆಎಂ’ ಸಾಕ್ಷ್ಯಚಿತ್ರದಲ್ಲಿ ‘ಮರೇಂಗೆ ತೋ ವಹಿನ್ ಜಾ ಕರ್’ ಹಾಡಿಗಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದರು.
68th #NationalFilmAwards | Music composer-filmmaker Vishal Bhardwaj receives the National Award for Best Music Direction, for his song 'Marenge Toh Vahin Jaa Kar' in the documentary film '1232 KMs', pic.twitter.com/NANbDb7djO
— ANI (@ANI) September 30, 2022
ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರು ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್ ಅವರಿಗೆ ಮೋಸ್ಟ್ ಫಿಲ್ಮ್ ಫ್ರೆಂಡ್ಲಿ ಸ್ಟೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
68th #NationalFilmAwards | President Droupadi Murmu presents the Most Film Friendly State award to Madhya Pradesh minister Usha Thakur. pic.twitter.com/8u3szAK7PL
— ANI (@ANI) September 30, 2022
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಚಲನಚಿತ್ರ ಪ್ರಪಂಚದ ತಾರೆಯರು, ಚಲನಚಿತ್ರ ನಿರ್ಮಾಪಕರು ಮತ್ತು ಇತರರು ಹಾಜರಿದ್ದಾರೆ.
ಈ ವಾರದ ಆರಂಭದಲ್ಲಿ 2020 ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಲ್ಲಿ ಆಶಾ ಪರೇಖ್ ಅವರನ್ನು ಘೋಷಿಸಲಾಯಿತು. ಹಿರಿಯ ಗಾಯಕಿ ಆಶಾ ಭೋಂಸ್ಲೆ, ಪ್ರಶಸ್ತಿ ವಿಜೇತ ಗಾಯಕ ಉದಿತ್ ನಾರಾಯಣ್, ಹಿರಿಯ ನಟಿ ಪೂನಂ ಧಿಲ್ಲೋನ್, ನಟಿ ಮತ್ತು ಸಂಸದೆ ಹೇಮಾಮಾಲಿನಿ ಮತ್ತು ಕನ್ನಡ ನಿರ್ದೇಶಕ-ನಿರ್ಮಾಪಕ ಟಿ.ಎಸ್.ನಾಗಾಭರಣ ಅವರನ್ನ ಒಳಗೊಂಡ ತೀರ್ಪುಗಾರರು ಈ ನಿರ್ಧಾರಕ್ಕೆ ಬಂದರು. ಹಮೀರ್ಪುರದಲ್ಲಿ ಅನುರಾಗ್ ಸಿಂಗ್ ಠಾಕೂರ್ ಈ ಘೋಷಣೆಯನ್ನ ಮಾಡುವಾಗ “ಹಿರಿಯ ನಟಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನ ಘೋಷಿಸುವುದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.
ಅತ್ಯುತ್ತಮ ನಟನಿಗಾಗಿ ತಮ್ಮ ಮೂರನೇ ರಾಷ್ಟ್ರೀಯ ಪ್ರಶಸ್ತಿಯನ್ನ ಗೆದ್ದ ಅಜಯ್ ದೇವಗನ್, ಈ ಕುರಿತು ಸಂತಸ ಹಂಚಿಕೊಂಡರು. “ಸೂರರೈ ಪೊಟ್ರು ಚಿತ್ರಕ್ಕಾಗಿ ಗೆದ್ದ ಸೂರ್ಯ ಅವರೊಂದಿಗೆ 68 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ತನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನ ಗೆದ್ದಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು ಎಲ್ಲರಿಗೂ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸೃಜನಶೀಲ ತಂಡ, ಪ್ರೇಕ್ಷಕರು ಮತ್ತು ನನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಅವರ ಆಶೀರ್ವಾದಕ್ಕಾಗಿ ನಾನು ನನ್ನ ಹೆತ್ತವರಿಗೆ ಮತ್ತು ಸರ್ವಶಕ್ತನಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತರ ಎಲ್ಲಾ ವಿಜೇತರಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.