ಕಾಬೂಲ್ : ಕಾಬೂಲ್ ಶಿಕ್ಷಣ ಕೇಂದ್ರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸ್ಥಳೀಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿ, “ನಾವು ಇಲ್ಲಿಯವರೆಗೆ ನಮ್ಮ ವಿದ್ಯಾರ್ಥಿಗಳ 100 ಮೃತ ದೇಹಗಳನ್ನ ಎಣಿಸಿದ್ದೇವೆ. ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಕ್ಲಾಸ್ ರೂಮ್ ತುಂಬಿತ್ತು. ಇದು ಅಣಕು ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಆದ್ದರಿಂದ ವಿದ್ಯಾರ್ಥಿಗಳು ನಿಜವಾದ ಪರೀಕ್ಷೆಗೆ ಸಿದ್ಧರಾಗಲು ಹಾಜರಾಗಿದ್ರು ” ಎಂದು ಅವರು ಹೇಳಿದರು. ಇನ್ನೀದನ್ನ ಕಾಜ್ ಉನ್ನತ ಶಿಕ್ಷಣ ಕೇಂದ್ರದ ಸದಸ್ಯರೊಬ್ಬರು ನನಗೆ ಹೇಳಿದ್ದಾರೆ ಎಂದಿದ್ದಾರೆ.
“We have so far counted 100 dead bodies of our students. The number of students killed is much higher. Classroom was packed. This was a mock university entrance exam, so students could prepare for the real one.” A member of the Kaaj higher education center tells me.
— BILAL SARWARY (@bsarwary) September 30, 2022
ಅಂದ್ಹಾಗೆ, ಇದಕ್ಕೂ ಮುನ್ನ “ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಈ ಶೈಕ್ಷಣಿಕ ಕೇಂದ್ರದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದಾನೆ. ದುರದೃಷ್ಟವಶಾತ್, 19 ಜನರು ಹುತಾತ್ಮರಾಗಿದ್ದಾರೆ ಮತ್ತು ಇತರ 27 ಜನರು ಗಾಯಗೊಂಡಿದ್ದಾರೆ” ಎಂದು ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ.