ಚಿತ್ರದುರ್ಗ: ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಬೇಕು ಎಂಬ ಒತ್ತಡ ಹೆಚ್ಚಿದೆ. ಗುರುವಾರದಂದು ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ನಿನ್ನೆ ಎಸ್.ನಿಜಲಿಂಗಪ್ಪ ಸ್ಮಾರಕದ ಆವಣರದಲ್ಲಿ ವೀರಶೈವ-ಲಿಂಗಾಯತರ ಸಮಾಲೋಚನಾ ಸಭೆ ನಡೆದಿತ್ತು.
BIG NEWS: ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು
ಮಠದ ಪೀಠಾದ್ಯಕ್ಷ ಸ್ಥಾನದಿಂದ ಶಿವಮೂರ್ತಿ ಮುರುಘಾ ಶರಣರನ್ನು ವಜಾ ಮಾಡಿ, ಹೊಸ ಪೀಠಾಧ್ಯಕ್ಷರನ್ನು ನೇಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದು ನಿರ್ಧರಿಸಲಾಗಿತ್ತು.
ಈ ಸಭೆಯ ನಿರ್ಣಯವನ್ನು ವಿರೋಧಿಸಿರುವ ಶಿವಮೂರ್ತಿ ಶರಣರ ಬೆಂಬಲಿಗರು ಗಾಂಧಿ ಜಯಂತಿಯಂದು ಮುರುಘಾ ಮಠದಲ್ಲಿ ಸರ್ವಧರ್ಮ ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಚರ್ಚಿಸಲು ಮಠದಲ್ಲಿ ಶಿವಮೂರ್ತಿ ಶರಣರ ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
BIG NEWS: ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು
ಆದರೆ ಸಭೆ ನಡೆದ ಬಗ್ಗೆ ಅಧಿಕೃತವಾಗಿ ಮಠದ ವತಿಯಿಂದ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಅಕ್ಟೋಬರ್ 2ರ ಸರ್ವಧರ್ಮ ಸಭೆಯು ಮಠದ ಪ್ರಭಾರ ಪೀಠಾದ್ಯಕ್ಷ ಮಹಾಂತ ರುದ್ರೇಶ್ವರ ಶ್ರೀ ನೇತೃತ್ವದಲ್ಲಿ ನಡೆಯಬಹುದು. ವಿವಿಧ ಮಠಗಳ ಮಠಾಧೀಶರು ಮತ್ತು ಮುಖಂಡರು ಸಭೆಯಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.