ಚಾಮರಾಜನಗರ : ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಾವು ಪಾದಯಾತ್ರೆ ಮಾಡುತ್ತೇವೆ, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧ ನಮ್ಮ ಭಾರತ್ ಜೋಡೋ ಯಾತ್ರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಸಮಾವೇಶದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಯಾರಿಂದಲೂ, ಯಾವ ಶಕ್ತಿಯಿಂದ ಯಾತ್ರೆಯನ್ನು ನಿಲ್ಲಿಸಲು ಆಗುವುದಿಲ್ಲ. ಭಾರತ್ ಜೋಡೋ ಉದ್ದೇಶ ಭಾಷಣ ಮಾಡುವುದಕ್ಕೆ ಅಲ್ಲ. ಬಿಜೆಪಿಯವರು ವಿಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜತೆ ಇಡೀ ದೇಶದ ಜನರು ಇದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ನಿರುದ್ಯೋಗ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಾವು ಪಾದಯಾತ್ರೆ ಮಾಡುತ್ತೇವೆ, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧ ನಮ್ಮ ಪ್ರತಿಭಟನೆ ನಡೆಯುತ್ತದೆ, ಮಳೆ ಚಳಿ ಲೆಕ್ಕಿಸದೇ ಪಾದಯಾತ್ರೆ ನಡೆಸುತ್ತಿದ್ದೇವೆ,. ಈ ಪಾದಯಾತ್ರೆಯಲ್ಲಿ ಯಾವುದೇ ದ್ವೇಷ, ಹಿಂಸೆ ಇಲ್ಲ, ಎಲ್ಲಾ ಧರ್ಮದ ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಯಾರೇ ಏನೇ ಮಾಡಿದರೂ ಈ ಯಾತ್ರೆ ನಿಲ್ಲುವುದಿಲ್ಲ. ಯಾರಿಂದ ಕೂಡ ಈ ಜೋಡೋ ಯಾತ್ರೆ ನಿಲ್ಲಿಸಲು ಆಗುವುದಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಅಲ್ಲ : ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ನಡೆಸಲು ಉದ್ದೇಶಿಸಿರುವ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಅಲ್ಲ. ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಗೆ ಸಂವಿಧಾನದ ಮೇಲೆ ಗೌರವ ವಿಲ್ಲ. ಅಂಬೇಡ್ಕರ್ ಕಾಲದಿಂದಲೂ ಬಿಜೆಪಿ ಸಂವಿಧಾನ ವಿರೋಧಿಸುತ್ತಿದೆ. ಬಿಜೆಪಿಯ ಅನೇಕ ಸಂಸದರು, ನಾಯಕರು ಸಂವಿಧಾನವನ್ನು ಟೀಕಿಸಿದ್ದಾರೆ. ಬಿಜೆಪಿ ವರಿಷ್ಠ ನಾಯಕರಿಗೆ ಇದೆಲ್ಲ ಗೊತ್ತಿಲ್ವಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಇನ್ನು ದೇಶದಲ್ಲಿ ಕೋಮುವಾದ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘RSS’ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ : ಸಿಎಂ ಬೊಮ್ಮಾಯಿ
BIG NEWS: ಜ. 2023 ರಿಂದ ಕ್ಲೌಡ್ ಗೇಮಿಂಗ್ ಸೇವೆ ʻಗೂಗಲ್ ಸ್ಟೇಡಿಯಾʼ ಸ್ಥಗಿತಗೊಳಿಸಲು Google ನಿರ್ಧಾರ… ಕಾರಣ?