ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಇಂದು ಮುಂಬೈ-ಗಾಂಧಿನಗರ ‘ವಂದೇ ಭಾರತ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್’ಗೆ ಚಾಲನೆ ನೀಡಲಿದ್ದಾರೆ. ಈ ರೈಲು ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಿಲ್ದಾಣಗಳ ನಡುವೆ ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
BIGG NEWS: ಜನಸಾಮಾನ್ಯರಿಗೆ ಗುಡ್ ನ್ಯೂಸ್: ಸಾರ್ವಜನಿಕರಿಂದ ಖಾಸಗಿ ವಾಹನಗಳು ದುಬಾರಿ ಹಣ ವಸೂಲಾತಿಗೆ ಬ್ರೇಕ್
ವಿಶೇಷತೆ ಏನು?: ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳೇ ಈ ರೈಲಿನ ವಿಶೇಷತೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿವೆ. ವಂದೇ ಭಾರತ್ ರೈಲು ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ದೇಶೀಯ ನಿರ್ಮಿತ ವಂದೇ ಭಾರತ್ ರೈಲಿನ 3ನೇ ಆವೃತ್ತಿ ಇದಾಗಿದ್ದು, ಮೊದಲ 2 ರೈಲುಗಳಿಗಿಂತ ವಿನೂತನ ಹಾಗೂ ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತವಾದರೂ ಪ್ರಯಾಣದ ಅನುಭವ ವಿಶೇಷವಾಗಿರುತ್ತದೆ.
BIGG NEWS: ಜನಸಾಮಾನ್ಯರಿಗೆ ಗುಡ್ ನ್ಯೂಸ್: ಸಾರ್ವಜನಿಕರಿಂದ ಖಾಸಗಿ ವಾಹನಗಳು ದುಬಾರಿ ಹಣ ವಸೂಲಾತಿಗೆ ಬ್ರೇಕ್
ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ. 45ರಷ್ಟು ಕಡಿಮೆ ಇರಲಿದೆ.ರೈಲು ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಕಂಪಾರ್ಟ್ಮೆಂಟ್ಗಳನ್ನು ಒಳಗೊಂಡಿರುತ್ತದೆ ಮತ್ತು ಸ್ಲೈಡಿಂಗ್ ಡೋರ್ಸ್, ಪ್ರತ್ಯೇಕ ಲೈಟ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು, ಅಟೆಂಡೆಂಟ್ ಕಾಲ್ ಬಟನ್ಗಳು, ಬಯೋ-ಟಾಯ್ಲೆಟ್ಗಳು, ಸ್ವಯಂಚಾಲಿತ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು, ಸಿಸಿಟಿವಿ ಕ್ಯಾಮೆರಾಗಳು, ಒರಗಿಕೊಳ್ಳುವ ಸೌಲಭ್ಯ ಮತ್ತು ಆರಾಮದಾಯಕ ಆಸನಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ.
ಸಂಚಾರ ಸಮಯ : ಈ ರೈಲು ಮುಂಬೈ ಸೆಂಟ್ರಲ್ನಿಂದ ಬೆಳಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಗಾಂಧಿನಗರ ತಲುಪಲಿದೆ. ಗಾಂಧಿನಗರದಿಂದ ಮಧ್ಯಾಹ್ನ 2.05ಕ್ಕೆ ಹೊರಟು ರಾತ್ರಿ 8.35ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ. ಇದು ಸೂರತ್, ವಡೋದರಾ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. ಇನ್ನು ಶತಾಬ್ದಿ ಎಕ್ಸ್ಪ್ರೆಸ್ ಈಗ ಮುಂಬೈ ಸೆಂಟ್ರಲ್ನಿಂದ 06.10ಕ್ಕೆ ಬದಲಾಗಿ 06.20ಕ್ಕೆ ಹೊರಡಲಿದೆ.
BIGG NEWS: ಜನಸಾಮಾನ್ಯರಿಗೆ ಗುಡ್ ನ್ಯೂಸ್: ಸಾರ್ವಜನಿಕರಿಂದ ಖಾಸಗಿ ವಾಹನಗಳು ದುಬಾರಿ ಹಣ ವಸೂಲಾತಿಗೆ ಬ್ರೇಕ್
ಮಧ್ಯಾಹ್ನ 12.25ಕ್ಕೆ ಬದಲಾಗಿ 12.45ಕ್ಕೆ ಅಹಮದಾಬಾದ್ ತಲುಪಲಿದೆ.ದೇಶದ 3ನೇ ರೈಲು: ಈಗಾಗಲೇ ದೇಶದಲ್ಲಿ 2 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಇದು ದೇಶದ ಮೂರನೇ ವಂದೇ ಭಾರತ್ ರೈಲು ಆಗಲಿದೆ. ಮೊದಲ ರೈಲು ದೆಹಲಿಯಿಂದ ವೈಷ್ಣೋದೇವಿವರೆಗೆ ಇದ್ದರೆ, ಮತ್ತೊಂದು ರೈಲು ದೆಹಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ. ಇದೀಗ 3ನೇ ರೈಲು ಗಾಂಧಿನಗರದಿಂದ ಮುಂಬೈಗೆ ಪ್ರಯಾಣ ಮಾಡಲಿದೆ.
ಫೆಬ್ರುವರಿ 15, 2019ರಂದು ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ-ಕಾನ್ಪುರ- ಅಲಹಾಬಾದ್ -ವಾರಣಾಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ. ಮೇಕ್ ಇನ್ ಇಂಡಿಯಾ ಘೋಷ ವಾಕ್ಯದಡಿ ಈ ಸ್ವದೇಶಿ ತಂತ್ರಜ್ಞಾನದ ರೈಲು ನಿರ್ಮಾಣ ಯೋಜನೆ ಚಾಲನೆಯಲ್ಲಿದೆ.