ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ( BJP Government ) ವಿರುದ್ಧ ಕಾಂಗ್ರೆಸ್ ( Congress ) ನಡೆಸಿದ್ದ ಪೇ ಸಿಎಂ ಅಭಿಯಾನದ ಭಾಗವಾಗಿ ಬೆಂಗಳೂರಿನ ಹಲವು ಕಡೆ ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಪೊಲೀಸರು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಪದಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದಂತಹ ‘ಪೇ ಸಿಎಂ ಪೋಸ್ಟರ್ ಪ್ರಕರಣ’ ವನ್ನು ಸಿಸಿಬಿಗೆ ವರ್ಗಾಯಿಸಿ ಬೆಂಗಳೂರು ನಗರ ಕಮೀಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
40% ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ (Pay Cm Posters) ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ಪೋಸ್ಟರ್ ನಗರದ ಹಲವು ಕಡೆಗಳಲ್ಲಿ ಹಾಕಲಾಗಿತ್ತು. ಹಾಗೂ ಈ ಸಂಬಂಧ ಹಲವರನ್ನು ಕೂಡ ಬಂಧಿಸಲಾಗಿತ್ತು.
ರಾಜ್ಯದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದ ನಗರದ ಹಲವೆಡೆ ದಾಖಲಾಗಿದ್ದ ‘PAY CM’ ಪೋಸ್ಟರ್ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ಬೆಂಗಳೂರು ನಗರ ಕಮೀಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದರು.
ಇದೀಗ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಬಿ ಆರ್ ನಾಯ್ಡು, ಸಂಜಯ್, ಗಗನ್, ಪವನ್, ವಿಶ್ವನಾಥ್ ಸೇರಿ ಹಲವರಿಗೆ ಅ. 1 ರಂದು ಸಿಸಿಬಿ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ( BJP Government ) ವಿರುದ್ಧ ಕಾಂಗ್ರೆಸ್ ( Congress ) ವಿನೂತನ ಅಭಿಯಾನ ಆರಂಭಿಸಿದೆ. ಈ ಬೆನ್ನಲ್ಲೇ ರಾಜ್ಯ ನನ್ನ ಹೆಸರು ಕೆಡಿಸಲು ಮಾಡಿಸಿದ ಷಡ್ಯಂತ್ರ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದರು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದ್ದರು.. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ QR ಕೋಡ್ ಜಟಾಪಟಿ ಶುರುವಾಗಿದೆ. 40% ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ (Pay Cm Posters) ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ಪೋಸ್ಟರ್ ನಗರದ ಹಲವು ಕಡೆಗಳಲ್ಲಿ ಹಾಕಲಾಗಿತ್ತು.
BIGG NEWS : ಇಂದಿನಿಂದ 21 ದಿನ ಕರ್ನಾಟಕದಲ್ಲಿ ‘ರಾಹುಲ್ ಗಾಂಧಿ ಐಕ್ಯತಾ ಯಾತ್ರೆ’ |Bharath Jodo Yathra