ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ( POSCO Case ) ನ್ಯಾಯಾಂಗ ಬಂಧನದಲ್ಲಿರುವಂತ ಮುರುಘಾ ಶ್ರೀಗಳಿಗೆ ( Murugha Sri ) ಈಗಾಗಲೇ ಕೋರ್ಟ್ ಜಾಮೀನು ನಿರಾಕರಿಸಿತ್ತು. ಅವರ ನ್ಯಾಯಾಂಗ ಬಂಧನ ಮುಂದುವರೆಸಿ ಆದೇಶಿಸಿ ಶಾಕ್ ನೀಡಿತ್ತು. ಈ ಬೆನ್ನಲ್ಲೇ ಇಂದಿನ ಸಭೆಯಲ್ಲಿ ಮುರುಘಾ ಶರಣರನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ತೆಗೆದು, ಹೊಸ ಪೀಠಾಧ್ಯಕ್ಷರ ಆಯ್ಕೆ ಮಾಡೋದಕ್ಕೆ ನಿರ್ಧಾರ ಕೈಗೊಂಡು ಮತ್ತೊಂದು ಬಿಗ್ ಶಾಕ್ ನೀಡಲಾಗಿದೆ.
ನಿನ್ನೆ ,ಮುರುಘಾ ಮಠದ ( Murugha Matt ) ಡಾ.ಶಿವಮೂರ್ತಿ ಶಿವಶರಣರು ಪೋಸ್ಕೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, ಮಠದ ಪೀಠಾಧ್ಯಕ್ಷರ ಆಯ್ಕೆ ಕುರಿತಂತೆ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ನಡೆಸಲಾಯಿತು.
ನಿನ್ನೆ ನಡೆದ ಸಭೆಯಲ್ಲಿ ಸಮುದಾಯದ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದು, ಮಹತ್ವದ ವಿಷಯಗಳ ಕುರಿತಂತೆ ಚರ್ಚೆ ನಡೆಸಲಾಗಿದೆ. ಇದಲ್ಲದೇ ಮುರುಘಾ ಶ್ರೀಗಳು ಜೈಲುಪಾಲು ಆಗಿರುವ ಹಿನ್ನಲೆಯಲ್ಲಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ಆಯ್ಕೆಯ ಬಗ್ಗೆಯೂ ಚರ್ಚೆ ನಡೆಯಿತು ಎನ್ನಲಾಗಿದೆ.
ಅಂತಿಮವಾಗಿ ಮುರುಘಾ ಮಠಕ್ಕೆ, ಹೊಸ ಪೀಠಾಧ್ಯಕ್ಷರ ಆಯ್ಕೆ ಮಾಡೋದಕ್ಕೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಮುರುಘಾ ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೈಬಿಟ್ಟು, ಹೊಸ ಪೀಠಾಧ್ಯಕ್ಷರ ಆಯ್ಕೆಯ ಬಗ್ಗೆ ಶೀಘ್ರವೇ ನಿರ್ಧಾರ ಹೊರ ಬೀಳಲಿದೆ ಎನ್ನಲಾಗಿದೆ.
BIGG NEWS : ರೈತ ಸಮುದಾಯಕ್ಕೆ ಗುಡ್ ನ್ಯೂಸ್: ಇನ್ಮುಂದೆ ‘7 ಗಂಟೆ ವಿದ್ಯುತ್’ ಸರಬರಾಜು – ಸಿಎಂ ಬೊಮ್ಮಾಯಿ ಆದೇಶ