ಹಾವೇರಿ: ರಾಜ್ಯದ ರೈತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ( BJP Government ) ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ 7 ಗಂಟೆಗಳು ಸತತವಾಗಿ ವಿದ್ಯುತ್ ಸರಬರಾಜಿಗೆ ( Electricity Supply ) ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಆದೇಶಿಸಿದ್ದಾರೆ.
ಈ ಸಂಬಂಧ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ವಿದ್ಯುಚ್ಛಕ್ತಿ ಸರಬರಾಜು ( Electricity supply ) ಐದು ಗಂಟೆಗಳ ಕಾಲವಿದ್ದು ಇದನ್ನು ಏಳು ಗಂಟೆಗಳಿಗೆ ವಿಸ್ತರಿಸಬೇಕು ಎಂಬ ರೈತರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.
ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು. ವಿದ್ಯುತ್ ಸಂಸ್ಥೆಗಳ ಖಾಸಗೀಕರಣವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಗಂಟುರೋಗದಿಂದ ದನಗಳು ಮೃತಪಟ್ಟರೆ ಪಟ್ಟರೆ 20 ಸಾವಿರ ರೂ.ಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದರು.
BIGG NEWS : ಮಾಜಿ ಪ್ರಧಾನಿ ‘ದೇವೇಗೌಡ’ ನಿವಾಸಕ್ಕೆ ಕೇಂದ್ರ ಸಚಿವೆ ‘ನಿರ್ಮಲಾ’ ಭೇಟಿ ; ಕಾರಣವೇನು ಗೊತ್ತಾ?