ಪುಣೆ : ಸಿಮೆಂಟ್ ಮಿಕ್ಸರ್ ಟ್ರಕ್ ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದ ಕೆಲವು ಆಟೋರಿಕ್ಷಾಗಳ ಮೇಲೆ ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಪುಣೆಯ ಹಡಪ್ಸರ್ನಲ್ಲಿ ನಡೆದಿದೆ.
BREAKING NEWS : ಫಿಫಾ ಮಾಜಿ ರೆಫರಿ ‘ಸುಮಂತ ಘೋಷ್’ ವಿಧಿವಶ |Former FIFA referee Sumanta Ghosh passes away
ಪುಣೆ-ಸೋಲಾಪುರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಹಡಪ್ಸರ್ನ ರವಿದರ್ಶನ್ ಪ್ರದೇಶದಲ್ಲಿ ಪುಣೆ ಕಡೆಗೆ ಹೋಗುತ್ತಿದ್ದ ಟ್ರಕ್ ಎದುರುಗಡೆಯಿಂದ ಬಂದ ದ್ವಿಚಕ್ರ ವಾಹನ ಸವಾರನನ್ನು ಉಳಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಎರಡರಿಂದ ಮೂರು ಆಟೋರಿಕ್ಷಾಗಳ ಮೇಲೆ ಪಲ್ಟಿಯಾಗಿದೆ. ಓರ್ವ ರಿಕ್ಷಾ ಚಾಲಕ ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಹಡಪ್ಸರ್ ಪೊಲೀಸ್ ಠಾಣಾ ಅಧಿಕಾರಿ ತಿಳಿಸಿದ್ದಾರೆ.
ಹಡಪ್ಸರ್ ಪೊಲೀಸ್ ಅಧಿಕಾರಿಗಳು , ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಿದೆ ಎನ್ನಲಾಗುತ್ತಿದೆ.
BIGG NEWS : RSS ಮುಖಂಡನ ಕಾರಿನ ಮೇಲೆ ‘ KILL YOU ‘ ಬರಹ ಪ್ರಕರಣ : ಇಬ್ಬರು ಅಪ್ರಾಪ್ತರು ಪೊಲೀಸರ ವಶಕ್ಕೆ