ಹಾವೇರಿ: ನಾವು ಬಿಜೆಪಿ ರಾಜೀನಾಮೇ ಕೊಟ್ಟು ಹೋಗಿದ್ದರೆ ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಆಗುತ್ತಿರಲಿಲ್ಲವೇನೋ. ನಮ್ಮ ರಾಜೀನಾಮೆಯಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಮತ್ತೊಂದು ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
BREAKING NEWS: ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ಆಯ್ಕೆ ಮಾಡಲು ಸರ್ಕಾರಕ್ಕೆ ಮನವಿ
ನಗರದಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಸಾರ್ಥಕವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಡೀಸೆಲ್ ರೇಟ್ ಬಹಳ ಎತ್ತರದಲ್ಲಿದೆ. ರೈತರ ಟ್ರ್ಯಾಕ್ಟರ್ಗೆ ಬಳಕೆಯಾಗುವ ಡೀಸೆಲ್ಗೆ ರಿಯಾಯಿತಿ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳಿದ್ದೆ. ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದರು.
ಒಂದು ಎಕರೆಗೆ 250 ರೂಪಾಯಿ ಡೀಸೆಲ್ ಸಬ್ಸಿಡಿ ಕೊಡುತ್ತಿದ್ದೇವೆ. ಈ ತಿಂಗಳಲ್ಲಿ ಸಬ್ಸಿಡಿ ಹಣ ಬಿಡುಗಡೆ ಆಗುತ್ತದೆ. ದೇಶದಲ್ಲಿ ಈ ರೀತಿಯಾಗಿ ರೈತರ ಟ್ರ್ಯಾಕ್ಟರ್ ಡೀಸೆಲ್ಗೆ ಸಬ್ಸಿಡಿ ಹಣ ಕೊಡುತ್ತಿರುವುದು ಎಲ್ಲೂ ಇಲ್ಲ ಎಂದರು.