ಮಹಾರಾಷ್ಟ್ರ: ಯುವಕನೊಬ್ಬ ತನ್ನ ಗೆಳತಿಗೆ ಹಾಡಹಗಲೇ ಗುಂಡು ಹಾರಿಸಿ ಕೊಂದಿದ್ದು, ನಂತ್ರ ತಾನು ಸಹ ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಶ್ರೀಕೃಷ್ಣ ಯಾದವ್ ಎಂದು ಗುರುತಿಸಲಾದ 26 ವರ್ಷದ ವ್ಯಕ್ತಿ 21 ವರ್ಷದ ನೇಹಾ ಮಹತೋ ಎಂಬ ಯುವತಿಗೆ ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಿ ಕೊಂದಿದ್ದಾನೆ. ನಂತ್ರ, ಆತನೂ ಸಹ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ವಾಹನದ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಅವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಶ್ರೀಕೃಷ್ಣ ಯಾದವ್ ಮೊದಲು ತನ್ನ ಗೆಳತಿ ನೇಹಾ ಮಹತೋಗೆ ಗುಂಡುಹಾರಿಸಿ ಕೊಂದು ಪರಾರಿಯಾಗಿದ್ದ. ಈ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ.
बोईसर परिसर एका तरुणाने तरुणीवर भरदिवसा गोळीबार केल्याची धक्कादायक घटना घडली आहे . गोळीबाराची ही धक्कादायक घटना सीसीटीव्ही कॅमेऱ्यात कैद झाली आहे. pic.twitter.com/QA4JBufawx
— News18Lokmat (@News18lokmat) September 29, 2022
“ಕೊಲೆ-ಆತ್ಮಹತ್ಯೆ ಘಟನೆಯು ಪ್ರೇಮ ಪ್ರಕರಣದಿಂದ ನಡೆದಿರಬಹುದು ಎಂದು ನಾವು ಶಂಕಿಸಿದ್ದೇವೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಬೋಯಿಸರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಸುರೇಶ್ ಕದಂ ತಿಳಿಸಿದ್ದಾರೆ.
ಚಿಕ್ಕಮಗಳೂರು ‘SDPI’ ಕಚೇರಿ ಮೇಲೆ ಪೊಲೀಸರ ದಾಳಿ ; ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ರೈಡ್ |SDPI Raid
ಅತಿಯಾದ ಮದ್ಯಪಾನವು ಯುವತಿಯರಲ್ಲಿ ʼಕೋವಿಡ್ ಸೋಂಕಿʼನ ಅಪಾಯ ಹೆಚ್ಚಿಸುತ್ತದೆ : ಸಂಶೋಧನೆ