ಹಾಸನ: ಆರ್ ಎಸ್ ಎಸ್ ದೇಶ ಕಟ್ಟುವ ಕಾರ್ಯ ಭಾರತದುದ್ದಕ್ಕೂ ಆಗಬೇಕೆಂದು ಬಯಸುತ್ತದೆ. ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಭಕ್ತ ಮತ್ತು ದೇಶ ದ್ರೋಹಿ, ದೇಶ ಭಕ್ತನ ಜೊತೆ ದೇಶ ದ್ರೋಹಿ ಒಲಿಸೋದು ಅಕ್ಷ್ಯಮ್ಯ ಅಪರಾಧ. ಆರ್ಎಸ್ಎಸ್ ಒಂದು ದೇಶ ಭಕ್ತ ಸಂಘಟನೆ. ಭಾರತವನ್ನ ಮೊಘಲ್ ಸ್ತಾನ್ ಮಾಡಿ ಹಿಂದುಗಳನ್ನೆಲ್ಲ ಸರ್ವನಾಶ ಮಾಡಬೇಕೆಂದು ಬಯಸೋದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೋಲಿಕೆ ಮಾಡುವವರಿಗೆ ಏನು ಹೇಳಬೇಕು, ಯಾರಾದರೂ ತಲೆ ಸರಿ ಇದ್ದರೆ ಹೋಲಿಕೆ ಮಾಡ್ತಾರಾ ಎಂದು ಪ್ರಶ್ನಿಸಿದರು.
ಆರ್ ಎಸ್ಎಸ್ ಬೈದರೆ ವೋಟು ಸಿಗುತ್ತೆ ಅನ್ನುವ ದುರಾಸೆ. ಇವರಿಗೂ ಪಿಎಫ್ಐಗೂ ವ್ಯತ್ಯಾಸ ಏನು..? ಪಿಎಫ್ಐ ಕೂಡ ಆರ್ಎಸ್ಎಸ್ನೇ ಟಾರ್ಗೆಟ್ ಮಾಡುವುದು, ಕಾಂಗ್ರೆಸ್ನವರು ಆರ್ ಎಸ್ಎಸ್ನೇ ಟಾರ್ಗೆಟ್ ಮಾಡ್ತಾರೆ. ಹಾಗಾದ್ರೆ ಇವರಿಬ್ಬರಿಗೂ ಒಳ ಹೊಂದಾಣಿಕೆ ಇರುವ ಸಾಧ್ಯತೆ ಇದೆ. ಮೊಘಲ್ ಸ್ತಾನ್ ಮಾಡಲು ನೀವು ನಮಗೆ ಸಹಾಯ ಮಾಡಿ ನಿಮಗೆ ನಾವು ವೋಟು ಹಾಕ್ತೀವಿ ಅಂತ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದರು