ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜನರು ಇನ್ನುಮುಂದೆ ಹೆಲಿಕಾಪ್ಟರ್ ನಲ್ಲೇ ನಗರ ಸುತ್ತಬಹುದು.ಹೌದು, ಇಂತಹ ಹೆಲಿಕಾಪ್ಟರ್ ಪ್ರಯಾಣ ಸೇವೆಯನ್ನು ನಗರದ ಜನತೆಗೆ ನೀಡಲು ಬ್ಲೇಡ್ ಸಂಸ್ಥೆಯು ಮುಂದಾಗಿದೆ.
ಜನರು ಬೆಂಗಳೂರಿನ HAL ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ಮೇಲೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬಹುದು. ಈ ಹೆಲಿಕಾಪ್ಟರ್ ಸೇವೆ ವಾರದಲ್ಲಿ ಐದು ದಿನಗಳು ಮಾತ್ರ ಸಿಗಲಿದಯಂತೆ.
ಹೆಲಿಕಾಪ್ಟರ್ ಪ್ರಯಾಣ ದರ ಎಷ್ಟು..?
ಬ್ಲೇಡ್ ಸಂಸ್ಥೆಯು ಈ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಪ್ರತಿ ಪ್ರಯಾಣಿಕನಿಗೆ 3,250 ರೂ. ಟಿಕೆಟ್ ದರವಿದೆ. ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಬಹುದಾಗಿದೆ. ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎಚ್ಎಎಲ್ಗೆ ಮತ್ತು ಸಂಜೆ 4.15 ಕ್ಕೆ ಅದೇ ಮಾರ್ಗದಲ್ಲಿ ವಿಮಾನ ಹಿಂತಿರುಗಲಿದೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ತನ್ನ ಅಂತರ್-ನಗರ ಸೇವೆಗಳನ್ನು ಪ್ರಾರಂಭಿಸಲಿದ್ದೇವೆ ಎಂದು ಎಂದು ಕಂಪನಿ ಮಾಹಿತಿ ನೀಡಿದೆ. ಅಕ್ಟೋಬರ್ 10 ರಿಂದ ಬೆಂಗಳೂರು ವಿಮಾನ ನಿಲ್ದಾಣ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಡುವೆ ನಗರದಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.
BIGG NEWS : ಖಾಸಗಿ ಶಾಲೆಗಳ ನವೀಕರಣ ಕುರಿತು ಮುಖ್ಯ ಮಾಹಿತಿ : ಅ.15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ