ಉತ್ತರಾಖಂಡ : ನೂತನ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರು ದೇಶದ ಎರಡನೇ ಸಿಡಿಎಸ್ (ರಕ್ಷಣಾ ಸಿಬ್ಬಂದಿ ಮುಖ್ಯಸ್ಥ) ಆಗಿ ನೇಮಕಗೊಂಡಿದ್ದಾರೆ. ಜನರಲ್ ಬಿಪಿನ್ ರಾವತ್ ನಿಧನದ ನಂತರ ಸೇನೆಯ ಈ ಮಹತ್ವದ ಹುದ್ದೆ ಖಾಲಿಯಾಗಿತ್ತು. ಇದೀಗ ಈ ಸ್ಥಾನಕ್ಕೆ ಅನಿಲ್ ಚೌಹಾಣ್ ನೇಮಕಗೊಂಡಿದ್ದಾರೆ.
BIG BREAKING NEWS: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳ ದಾಳಿ | DK Shivakumar
ಅನಿಲ್ ಚೌಹಾಣ್ ಅವರು ನೂತನ ಸಿಡಿಎಸ್ ಆಗಿದ್ದು, ಉತ್ತರಾಖಂಡದ ಜನರಲ್ಲಿ ಸಂತೋಷದ ವಾತಾವರಣವಿದೆ. ಕಾರಣ ಅನಿಲ್ ಚೌಹಾಣ್ ಅವರು ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯವರು. ಬಿಪಿನ್ ರಾವತ್ ಕೂಡ ಉತ್ತರಾಖಂಡದವರಾಗಿದ್ದರು.
9 ತಿಂಗಳಿನಿಂದ ಖಾಲಿಯಿದ್ದ ಸಿಡಿಎಸ್ ಹುದ್ದೆ
ಸಿಡಿಎಸ್ ಆಗಿ ನೇಮಕಗೊಳ್ಳುವ ಮೊದಲು, ಅನಿಲ್ ಚೌಹಾಣ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್ನಲ್ಲಿ ಮಿಲಿಟರಿ ಸಲಹೆಗಾರರಾಗಿ ನೇಮಿಸಲಾಯಿಗಿತ್ತು. ಅವರು 40 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ದೇಶದ ಮೊದಲ ಸಿಡಿಎಸ್ ಜನರಲ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಮಿಳುನಾಡಿನಲ್ಲಿ ನಡೆದ ಈ ಅಪಘಾತದಲ್ಲಿ ಅವರ ಪತ್ನಿಯೂ ಸಾವನ್ನಪ್ಪಿದ್ದಾರು. ಜನರಲ್ ರಾವತ್ ಅವರ ನಿಧನದಿಂದಾಗಿ ಕಳೆದ ಒಂಬತ್ತು ತಿಂಗಳಿನಿಂದ ಸಿಡಿಎಸ್ ಹುದ್ದೆ ಖಾಲಿಯಾಗಿತ್ತು. ಜನರಲ್ ರಾವತ್ ಕೂಡ ಪೌರಿ ನಿವಾಸಿಯಾಗಿದ್ದರು.
ಅನಿಲ್ ಚೌಹಾಣ್ ಅಭಿನಂದಿಸಿದ ಉತ್ತರಾಖಂಡ ಸಿಎಂ
ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರ ನೇಮಕಕ್ಕೆ ಸಂತಸ ವ್ಯಕ್ತಪಡಿಸಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರನ್ನು ಅಭಿನಂದಿಸಿದ್ದಾರೆ. ನೇಮಕಾತಿಯ ಮಾಹಿತಿ ಹೊರಬಿದ್ದ ಬಳಿಕ ಟ್ವೀಟ್ ಮಾಡಿರುವ ಅವರು, ‘ಉತ್ತರಾಖಂಡದ ಪುತ್ರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ಎಸ್.ಎನ್.) ಜಿ ಅವರಿಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ (ಸಿಡಿಎಸ್) ನೇಮಕಗೊಂಡಿರುವ ಕುರಿತು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಸಮರ್ಥ ನಾಯಕತ್ವದಲ್ಲಿ ಭಾರತೀಯ ಸೇನೆ ಎಂದಿನಂತೆ ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.
उत्तराखंड के सपूत लेफ्टिनेंट जनरल अनिल चौहान (से.नि.) जी को चीफ ऑफ डिफेंस स्टाफ (CDS) नियुक्त किए जाने पर हार्दिक बधाई एवं शुभकामनाएं।
हमें पूर्ण विश्वास है कि आपके कुशल नेतृत्व में भारतीय सेना सदैव की भांति राष्ट्रीय सुरक्षा के क्षेत्र में नया कीर्तिमान स्थापित करेगी। pic.twitter.com/6JUgWzJ7rA
— Pushkar Singh Dhami (@pushkardhami) September 28, 2022