ಡೆಹ್ರಾಡೂನ್: ಜೈಲು ಹೇಗಿರುತ್ತದೆ, ಅಲ್ಲಿನ ವ್ಯವಸ್ಥೆ ಹೇಗೆ ಎಂಬ ಕುತೂಹಲವಿದ್ದರೆ ಇಲ್ಲೊಂದು ಆಫರ್ ಇದೆಯಂತೆ ನೋಡಿ..ನೀವು 500 ರೂ ಕೊಟ್ಟರೆ ಸಾಕು ಒಂದು ರಾತ್ರಿ ನೀವು ಜೈಲಿನಲ್ಲಿ ಕಳೆಯಬಹುದಂತೆ.
ಇದೇನಿದು ಅಂತ ಶಾಕ್ ಆದ್ರಾ..? ಹೌದು, ಉತ್ತರಾಖಂಡದ (Uttarakhand) ಜೈಲು ಆಡಳಿತವು ಈ ರೀತಿಯ ಆಫರ್ ನೀಡಿದೆ. ಯೆಸ್, ಒಂದು ರಾತ್ರಿ ಜೈಲಿನಲ್ಲಿ ಕೈದಿಗಳಂತೆ ಇರಲು ಉತ್ತರಾಖಂಡದ ಜೈಲು ಅವಕಾಶ ನೀಡಿದೆ. ಇಂತಹ ವಿಚಿತ್ರ ಆಸೆ ನಿಮಗಿದ್ದರೆ ಈ ಜೈಲಲ್ಲಿ ನೀವು ತಂಗಬಹುದು.
ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ರೆ ಸಾಕು ಜೈಲಿನಲ್ಲಿ ನೀವು ಉಳಿದುಕೊಳ್ಳಬಹುದು. ಅಂದಹಾಗೆ ಈ ಜೈಲಿನಲ್ಲಿ ಕೈದಿಗಳು ಧರಿಸುವಂತಹ ಬಟ್ಟೆ ಹಾಗೂ ನೀಡುವ ಊಟವನ್ನೇ ನೀಡಲಾಗುತ್ತದೆ.
ಆದರೆ ಸದ್ಯ ಈ ಜೈಲಿನಲ್ಲಿ ಇದೀಗ ಕೈದಿಗಳಿಲ್ಲ,ಅದಕ್ಕಾಗಿ ಅತಿಥಿಗಳಿಗೆ ಬಾಡಿಗೆ ಕೊಡಲಾಗುತ್ತಿದೆಯಂತೆ. ಇಲ್ಲಿ ಅತಿಥಿಗಳು ಉಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಇದೆಯಂತೆ. ಅದೇನೆ ಇರಲಿ ಇಲ್ಲಿಗೆ ಬಂದವರಿಗೆ ಥೇಟ್ ಜೈಲಿನ ಅನುಭವ ಸಿಗುವುದಂತು ಗ್ಯಾರೆಂಟಿ. ಅಂದಹಾಗೆ ಈ ಹಲ್ದ್ವಾನಿ ಜೈಲನ್ನು 1903ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
Ind vs SA t20: ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ, ಅರ್ಷ್ದೀಪ್, ಪಂತ್ಗೆ ಅವಕಾಶ
BIG BREAKING NEWS: ‘ಸಾರಿಗೆ ನೌಕರ’ರಿಗೆ ದಸರಾ ಗಿಫ್ಟ್: ‘ಗಳಿಕೆ ರಜೆ ನಗದೀಕರಣ’ಕ್ಕೆ ಅವಕಾಶ | KSRTC Employees