ಬೆಂಗಳೂರು: ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) 5 ವರ್ಷಗಳ ಕಾಲ ನಿಷೇಧ ಕೇಂದ್ರ ಸರ್ಕಾರ ನೀಷೇಧಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, PFI ಅನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದೆ. ಆದರೆ ಇಷ್ಟು ತಡವಾಗಿ ಬ್ಯಾನ್ ಮಾಡಿರುವುದು ಗುಪ್ತಚರ ಇಲಾಖೆಯ ದೊಡ್ಡ ವೈಫಲ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
BIGG NEWS: ದೇಶದಲ್ಲಿ 5 ವರ್ಷ `PFI’ ಬ್ಯಾನ್ :ವರಿಷ್ಠರಿಗೆ ಅಭಿನಂದನೆ ತಿಳಿಸಿದ ಕೆ.ಎಸ್ ಈಶ್ವರಪ್ಪ
ಕರ್ನಾಟಕ, ಗುಜರಾತ್, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ಹಲವು ಕಡೆ ಈ ಸಂಘಟನೆ ಇತ್ತು. ಇಷ್ಟು ವರ್ಷ ಜಾರಿ ನಿರ್ದೆಶನಾಲಯ ಮತ್ತು ಗುಪ್ತಚರ ಇಲಾಖೆ ಹಾಗೂ ಸ್ಟೇಟ್ ಡಿಪಾರ್ಟ್ಮೆಂಟ್ಗಳಿಗೆ ಅವರ ಭಯೋತ್ಪಾದನಾ ಚಟುವಟಿಕೆ, ಅಕ್ರಮ ಹಣ ವರ್ಗಾವಣೆಗಳು ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು.ಈ ಸಂಘಟನೆ ದೇಶಾದ್ಯಂತ ಇದ್ದರೂ ಇಷ್ಟು ದಿನ ಯಾಕೆ ಹೀಗೇ ಬಿಟ್ಟಿದ್ದರು ಎಂಬ ಪ್ರಶ್ನೆ ಮೂಡುತ್ತದೆ. ಇಷ್ಟು ತಡವಾಗಿ ಪಿಎಫ್ಐಯನ್ನು ಬ್ಯಾನ್ ಮಾಡಿರುವುದು ಅಧಿಕಾರಿಗಳ ದೊಡ್ಡ ವೈಫಲ್ಯ ಎಂದು ಹೇಳಿದರು.