ಲಖನೌ(ಉತ್ತರ ಪ್ರದೇಶ): ಇಂದು ಖ್ಯಾತ ಗಾಯಕಿ ʻಲತಾ ಮಂಗೇಶ್ಕರ್ʼಅವರ 93ನೇ ಜನ್ಮದಿನ. ಈ ಸಂದರ್ಭದಲ್ಲಿ ಇಂದು ಅಯೋಧ್ಯೆಯ ಚೌಕ್ಗೆ ಅವರ ಹೆಸರು ನಾಮಾಕರಣ ಮಾಡಲಾಗುವುದು.
ಉತ್ತರ ಪ್ರದೇಶದ ಅಯೋಧ್ಯೆಯ ಚೌಕ್ ಅನ್ನು ಈಗ ಲತಾ ಮಂಗೇಶ್ಕರ್ ಚೌಕ್ ಎಂದು ಕರೆಯಲಾಗುತ್ತದೆ. ಲತಾ ಮಂಗೇಶ್ಕರ್ ಅವರ ಹೆಸರಿನ ಸ್ಮೃತಿ ಚೌಕ್ ಉದ್ಘಾಟನಾ ಸಮಾರಂಭ ಇಂದು ನಡೆಯುತ್ತದೆ.
ಇಲ್ಲಿ 14 ಟನ್ ತೂಕದ 40 ಅಡಿ ಉದ್ದದ ವೀಣೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಚೌಕ್ ಅನ್ನು ಉದ್ಘಾಟಿಸಲಿದ್ದಾರೆ. ಇನ್ನೂ, ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, “ಲತಾ ದೀದಿ ಅವರ ಜನ್ಮದಂದು ಅಯೋಧ್ಯೆಯ ಚೌಕ್ಗೆ ಅವರ ಹೆಸರಿಡಲಾಗುವುದು. ಇದು ಭಾರತದ ಶ್ರೇಷ್ಠ ಐಕಾನ್ಗಳಲ್ಲಿ ಒಬ್ಬರಿಗೆ ಸೂಕ್ತವಾದ ಗೌರವವಾಗಿದೆ” ಎಂದು ಅವರು ಹೇಳಿದರು.
Remembering Lata Didi on her birth anniversary. There is so much that I recall…the innumerable interactions in which she would shower so much affection. I am glad that today, a Chowk in Ayodhya will be named after her. It is a fitting tribute to one of the greatest Indian icons.
— Narendra Modi (@narendramodi) September 28, 2022
ಸರಯೂ ನದಿಯ ದಡದಲ್ಲಿರುವ ‘ಲತಾ ಮಂಗೇಶ್ಕರ್ ಚೌರಾಹಾ’ ಎಂಬ ಛೇದಕವನ್ನು ಅಂದಾಜು 7.9 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಛೇದಕವು ಪ್ರವಾಸಿಗರಿಗೆ ಮತ್ತು ಸಂಗೀತ ಪ್ರಿಯರಿಗೆ ಉತ್ತಮ ಆಕರ್ಷಣೆಯಾಗಿದೆ. ಇಂತಹ ದೈತ್ಯ ಸಂಗೀತ ವಾದ್ಯ ಅಳವಡಿಸಿರುವುದು ದೇಶದಲ್ಲೇ ಪ್ರಥಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲತಾ ಮಂಗೇಶ್ಕರ್ ಫೆಬ್ರವರಿ 6 ರಂದು ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.
BIG NEWS: ಅ. 1 ರಿಂದ ಈ ಪಿಂಚಣಿ ಯೋಜನೆ ಎಲ್ಲರಿಗೂ ಅನ್ವಯಿಸುವುದಿಲ್ಲ… ಇಲ್ಲಿದೆ ಮಹತ್ವದ ಮಾಹಿತಿ | Pension Scheme
PFI ಸಂಘಟನೆಗೆ ಮತ್ತೊಂದು ಬಿಗ್ ಶಾಕ್ : ಹಣಕಾಸು ವಹಿವಾಟು ನಿರ್ಬಂಧ ಹೇರಿದ ಕೇಂದ್ರ ಸರ್ಕಾರ