ನವದೆಹಲಿ : ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರ ಬಂಡಾಯದ ನಂತ್ರ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪಕ್ಷದ ವೀಕ್ಷಕರು ತಮ್ಮ ವರದಿಯನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ.
ಮೂಲಗಳ ಪ್ರಕಾರ, ಈ ವರದಿಯಲ್ಲಿ, ಅಶೋಕ್ ಗೆಹ್ಲೋಟ್ ಅವರಿಗೆ ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಈ ಬೆಳವಣಿಗೆಗೆ ಅವರು ತಾಂತ್ರಿಕವಾಗಿ ಜವಾಬ್ದಾರರು ಎಂದು ವೀಕ್ಷಕರು ವಿವರಿಸಿಲ್ಲ. ಆದಾಗ್ಯೂ, ಶಾಸಕರ ಸಮಾನಾಂತರ ಸಭೆಯನ್ನ ಕರೆದಿರುವ ಪ್ರಮುಖ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.