ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಪಿಎಫ್ಐ ಶಂಕಿತ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹಲವು ಸ್ಪೋಟಕ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇದೀಗ ಪಿಎಫ್ಐಗೆ ಪಾಕಿಸ್ತಾನ ಸಂಪರ್ಕವಿತ್ತು ಎಂಬ ಶಾಕಿಂಗ್ ವಿಚಾರ ಬಯಲಾಗಿದೆ.
ಬಂಧಿತ ಆರೋಪಿಗಳ ಮೊಬೈಲ್ನಲ್ಲಿ 50ಕ್ಕೂ ಹೆಚ್ಚು ಪಾಕಿಸ್ತಾನಿ ಸಂಖ್ಯೆ ಪತ್ತೆ..!
ಬಂಧಿತ ಆರೋಪಿಗಳ ಮೊಬೈಲ್ನಲ್ಲಿ 50ಕ್ಕೂ ಹೆಚ್ಚು ಪಾಕಿಸ್ತಾನಿ ಸಂಖ್ಯೆ ಪತ್ತೆಯಾಗಿದೆ. ಹಲವು ಬಾರಿ ಆರೋಪಿಗಳು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರೆ. ಆರೋಪಿಗಳ ಮೊಬೈಲ್ ಫೋನ್, ಲ್ಯಾಪ್ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತನಿಖೆ ಮಾಡಿದಾಗ ಅವರಿಗೆ ಪಾಕಿಸ್ತಾನದ ಜೊತೆ ನಂಟು ಇದ್ದ ವಿಚಾರ ಬಯಲಾಗಿದೆ.
ಆರೋಪಿ ಅಬ್ದುಲ್ ಖಾಲಿದ್ ನ. ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಪಾಕಿಸ್ತಾನಿ ಸಂಖ್ಯೆಗಳು ಪತ್ತೆಯಾಗಿವೆ. ಆತನ ಸಹೋದರ ಮೊಹಮ್ಮದ್ ಮಹಮೂದ್ ಕೂಡ 6 ಬಾರಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ತನಿಖಾ ಸಂಸ್ಥೆ ಮೊಹಮ್ಮದ್ ಮೆಹಮೂದ್ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.
ಇತ್ತೀಚೆಗೆ ಪಿಎಫ್ಐ ‘PFI’ ಶಂಕಿತರ ಮೊಬೈ’ಲ್ ನಲ್ಲಿ ಸಾಕ್ಷಿಗಳನ್ನೇ ನಾಶ ಮಾಡುವ ಆ್ಯಪ್ ಇರುವುದು ಕಂಡು ಬಂದಿದೆ. ಬಂಧಿತ ಎಲ್ಲರ ಮೊಬೈಲ್ ನಲ್ಲಿ ತಾವೇ ಸಿದ್ದಪಡಿಸಿದ ಐ ರೀಡರ್ ಆ್ಯಪ್ ಪತ್ತೆಯಾಗಿದೆ. ಎನ್ ಐ ಎ ಹಾಗೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಹಲವು ಸ್ಪೋಟಕ ಮಾಹಿತಿ ಕಲೆಹಾಕಿದ್ದಾರೆ.