ಉತ್ತರ ಪ್ರದೇಶ : ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಡೇಂಜರ್ ಸ್ಟಂಟ್ ಮಾಡುವ ಒಂದಲ್ಲ ಒಂದು ಅಘಾತಕಾರಿ ವಿಡಿಯೋ ವೈರಲ್ ಆಗುತ್ತಿರುವುದು ಸಮಾನ್ಯವಾಗಿದೆ. ಇಲ್ಲೊಬ್ಬ ವ್ಯಕ್ತಿ ಅಂತಹದ್ದೇ ವಿಚಿತ್ರ ಸ್ಟಂಟ್ ಮಾಡಿದ್ದಾನೆ
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಅಮರಿಯಾ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಯುವಕನೊಬ್ಬ ಹೈವೋಲ್ಟೇಜ್ ತಂತಿಗಳ ಮೇಲೆ ತನ್ನನ್ನು ತಾನೇ ತೂಗಾಡುತ್ತಾ ಬ್ಯಾಲೆನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನಾ ಸ್ಥಳದಲ್ಲಿ ಸುತ್ತಲೂ ಜನರು ಜಮಾಯಿಸಿ ವ್ಯಕ್ತಿಯು ತಂತಿಗಳ ಮೇಲೆ ನೇತಾಡುತ್ತಾ ಸಾಹಸಗಳನ್ನು ನೋಡಿ ಶಾಕ್ ಆಗಿದ್ದಾರೆ.
Pilibhit black Amriya me man 11000 volt light ke tar pe for losing his job pic.twitter.com/Rwtq6N1mmI
— Irshad Khan (@IrshadK54670394) September 26, 2022
ವರದಿಯ ಪ್ರಕಾರ, ವಿದ್ಯುತ್ ಮಾರ್ಗಗಳು 11 ಕೆವಿ ಹೈ-ಟೆನ್ಷನ್ ಘಟಕ ಎಂದು ಹೇಳಲಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಭಾರೀ ಅನಾಹುತ ತಪ್ಪಿದೆ ಮಾಧ್ಯಮಗಳ ವರದಿಯಿಂದ ಬಹಿರಂಗವಾಗಿದೆ.
ಇದೇ ವೇಳೆ ವ್ಯಕ್ತಿ ನೇತಾಡುತ್ತಿದ್ದ ಕಾರಣ ಸ್ಥಳೀಯರು ವಿದ್ಯುತ್ ಲೈನ್ ಆರಂಭಿಸದಂತೆ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಕೆಳಗೆ ಬರುವಂತೆ ಮನವೊಲಿಸಿದರು. ವ್ಯಕ್ತಿಯನ್ನು ನೌಶಾದ್ ಎಂದು ಗುರುತಿಸಲಾಗಿದ್ದು, ಆತ ತನ್ನ ಗಾಡಿಯಲ್ಲಿ ಬಳೆಗಳನ್ನು ಮಾರುಕಟ್ಟೆ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಗಮನಾರ್ಹವಾಗಿ, ಇಂತಹ ಸಾಹಸಗಳು ಅಪಾಯಕಾರಿ ಮತ್ತು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ವೈರಲ್ ಆಗುವ ಪ್ರಯತ್ನದಲ್ಲಿ, ಅನೇಕ ಜನರು ಅಂತಹ ಸಾಹಸಗಳನ್ನು ಮಾಡಲು ಪ್ರಯತ್ನಿಸಿದವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.