ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಹೊರಗೆ ಆಟವಾಡಲು ಹಿಂದೇಟು ಹಾಕುತ್ತಾರೆ. ಆದರೆ ಮಕ್ಕಳು ಮನೆಯಲ್ಲಿ ದಿನಪೂರ್ತಿ ಟಿವಿ ಮುಂದೆಯೇ ಕೂಳಿತಿರುತ್ತಾರೆ. ಇಲ್ಲವೆಂದರೆ ಮೊಬೈಲ್ ಹಿಡಿದೋ ಕೂರುತ್ತಾರೆ. ಪೋಷಕರು ಹೇಳಿದಂತೆ ಮಕ್ಕಳು ಕೇಳುವ ಬದಲು, ಮಕ್ಕಳು ಹೇಳಿದಂತೆ ಹೆತ್ತವರು ಕೇಳಬೇಕಾದ ಪರಿಸ್ಥಿತಿ ಇದೆ. ಆಟವಾಡುತ್ತಾ ಇರಬೇಕಾದ ಮಕ್ಕಳು ಜಾಸ್ತಿ ಇಲೆಕ್ಟ್ರಾನಿಕ್ ವಸ್ತುಗಳನ್ನು ನೆಚ್ಚಿಕೊಳ್ಳುತ್ತಾರೆ.
BIGG NEWS: ಕಾಂಗ್ರೆಸ್ ನವರಿಗೆ ನರಕ ಉಂಟಾಗಿದೆ; ಕೈ PAY CM ಅಭಿಯಾನ ವಿರುದ್ಧ ಶಿವರಾಮ್ ಹೆಬ್ಬಾರ್ ಕಿಡಿ
ನಿಮ್ಮ ಮಕ್ಕಳು ಟಿವಿಯಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ನೀವು ಗಮನಿಸುತ್ತಿರಬೇಕು. ಸಾಧ್ಯವಾದರೆ ಅವರ ಪಕ್ಕದಲ್ಲಿ ಕುಳಿತುಕೊಂಡು ಅವರಿಗೆ ಮಾರ್ಗದರ್ಶನ ನೀಡಿದರೆ ಒಳ್ಳೆಯದು. ಟಿವಿಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ. ಸಾಧ್ಯವಾದಷ್ಟು ಅವರ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ತೋರಿಸಿ. ಅದು ಏನೆಂಬುದನ್ನು ಅವರಿಗೆ ವಿವರಿಸಿ. ಅವುಗಳ ಬಗ್ಗೆ ಚರ್ಚಿಸುವ ಮೂಲಕವೂ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸಬಹುದು.
BIGG NEWS: ಕಾಂಗ್ರೆಸ್ ನವರಿಗೆ ನರಕ ಉಂಟಾಗಿದೆ; ಕೈ PAY CM ಅಭಿಯಾನ ವಿರುದ್ಧ ಶಿವರಾಮ್ ಹೆಬ್ಬಾರ್ ಕಿಡಿ
ಇದರಿಂದಾಗಿ ಮಕ್ಕಳು ಹೊರಗೆ ಹೋಗದೆ ಇದ್ದರೂ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಇದರಿಂದ ನಿಮ್ಮ ಮಕ್ಕಳಿಗೂ ಅನುಕೂಲವಾಗುತ್ತದೆ. ಮಕ್ಕಳಿಗೆ ಹೇಳಿಕೊಡುವ ಉದ್ದೇಶದಿಂದ ನೀವೂ ಕಲಿತಂತಾಗುತ್ತದೆ. ಇತ್ತೀಚಿನ ಹಲವು ಅಧ್ಯಯನಗಳು ಕೂಡಾ ಇದನ್ನೇ ಹೇಳಿವೆ. ತಮ್ಮ ಮಕ್ಕಳೊಂದಿಗೆ ಟಿವಿ ನೋಡುವ ವಯಸ್ಕರು ಅವರಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಟಿವಿಯಲ್ಲಿನ ಕೆಲವು ಕಾರ್ಯಕ್ರಮಗಳ ಮಾಹಿತಿ ಮತ್ತು ಅರ್ಥವನ್ನು ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಸರಳೀಕರಿಸುವಲ್ಲಿ ಮಕ್ಕಳು ತೊಂದರೆ ಅನುಭವಿಸಬಹುದು.
BIGG NEWS: ಕಾಂಗ್ರೆಸ್ ನವರಿಗೆ ನರಕ ಉಂಟಾಗಿದೆ; ಕೈ PAY CM ಅಭಿಯಾನ ವಿರುದ್ಧ ಶಿವರಾಮ್ ಹೆಬ್ಬಾರ್ ಕಿಡಿ
ಆದರೆ ದೊಡ್ಡವರು ಮಕ್ಕಳೊಂದಿಗೆ ಒಟ್ಟಿಗೆ ಟಿವಿ ನೋಡಿ ಅದರ ಬಗ್ಗೆ ವಿವರಿಸಿದರೆ ಮತ್ತು ತಿಳಿಯದ ವಿಷಯಗಳ ಬಗ್ಗೆ ಮಾತನಾಡಿದರೆ, ವಿಷಯವನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಮಕ್ಕಳಿಗೆ ಅಂತಹ ಸಹಭಾಗಿತ್ವದ ಅಗತ್ಯವಿದೆ.