ಮುಂಬೈ: ಮಹಾರಾಷ್ಟ್ರದ ಅಂಬರ್ ನಾಥ್ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಸ್ಕೂಲ್ ಬಸ್ಸೊಂದು ಸೋಮವಾರ ಬೆಳಗ್ಗೆ ಪಲ್ಟಿಯಾಗಿ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ.
ಮುಂಬೈನ ಅಂಬರನಾಥ್ ಗ್ರೀನ್ ಸಿಟಿ ಕಾಂಪ್ಲೆಕ್ಸ್ನ ಬಳಿ ಬೆಳಿಗ್ಗೆ 6.50 ರ ಸುಮಾರಿಗೆ ಶಾಲಾ ಬಸ್ ಚಾಲಕ ರ್ಯಾಂಪ್ನಲ್ಲಿ ಬಸ್ ಅನ್ನು ರಿವರ್ಸ್ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ, ಕಟ್ಟಡವೊಂದರ ಮುಂದೆ ಚಾಲಕ ಶಾಲಾ ಬಸ್ಅನ್ನು ರಿವರ್ಸ್ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಂಬರನಾಥದ ಗ್ರೀನ್ ಸಿಟಿ ಕಾಂಪ್ಲೆಕ್ಸ್ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.
@PMOIndia@nitin_gadkari@CMOMaharashtra @DGPMaharashtra @ThaneCityPolice @ThaneCollector
Ambernath(Thane) #INNERQWHEELSCHOOL bus (MH43H0479)got accident inside #GreenCityComplex Ambernath e.Seems rejected bus was used 2Transport school students as no details found on #RTOOnline pic.twitter.com/5EfGtFv8FH— Ambernath Citizen’s Forum (ACF) (@ACF8983506000) September 26, 2022
ಅದೃಷ್ಟವಶಾತ್, ಸ್ಥಳೀಯರು ಮತ್ತು ಸುತ್ತಮುತ್ತಲಿನ ಜನರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಲ್ಟಿಯಾದ ಬಸ್ನಿಂದ ಮಕ್ಕಳನ್ನು ರಕ್ಷಿಸಿದ್ದರಿಂದ ಯಾವುದೇ ಅಪಾಯವಾಗಿಲ್ಲ.
ಈ ಮಧ್ಯೆ, ಈ ಬಸ್ ಶಾಲೆಗೆ ಸೇರಿದ್ದಲ್ಲ ಎಂದು ರೋಟರಿ ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದ್ದು, ಬಸ್ಗೂ ತಮಗೂ ಯಾವುದೇ ಸಂಬಂಧಿವಿಲ್ಲ. ಈ ಬಸ್ ಖಾಸಗಿಯಾಗಿದ್ದು, ಪೋಷಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಬಸ್ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಮತ್ತೊಂದೆಡೆ ಸ್ಥಳೀಯರು ಬಸ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ಗೆ ವಿಮೆ ಮಾಡಲಾಗಿಲ್ಲ ಮತ್ತು ಬಸ್ನ ಸ್ಥಿತಿ ತುಂಬಾ ಹದಗೆಟ್ಟಿದ್ದು ಕಂಡುಬಂದಿದೆ.
BIGG NEWS: PFI & SDPI ಸಂಘಟನೆಗಳು ಬ್ಯಾನ್ ಮಾಡಬೇಕು; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ