ಹಾವೇರಿ : ರಾಜ್ಯಾದ್ಯಂತ ಪಿಎಫ್ ಐ (PFI) ಸಂಘಟನೆಯ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 70 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಪಿಎಫ್ ಐ ಸಂಘಟನೆ ನಿಷೇಧದ ಬಗ್ಗೆ ಸರ್ಕಾರ ತೀರ್ಮಾನಿಸುತ್ತದೆ. ಇದರಲ್ಲಿ ಲಾಭನಷ್ಟದ ಪ್ರಶ್ನೆಯಿಲ್ಲ. ದೇಶ ಉಳಿಸೋದು, ಶಾಂತಿ ಕಾಪಾಡೋದು ಮುಖ್ಯ, ಲಾಭ-ನಷ್ಟದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಇಲ್ಲ ಎಂದರು.
Watch Video: ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆಸಿದ ನಾಸಾ ವಿಜ್ಞಾನಿಗಳು… ಯಾಕೆ ಗೊತ್ತಾ? | NASA
ಕಾಂಗ್ರೆಸ್ ಪೇ ಸಿಎಂ ಕ್ಯಾಂಪೇನ್ ಗೆ ಕಿಡಿಕಾರದ ಸಚಿವ ಬಿ.ಸಿ ಪಾಟೀಲ್, ಕಾಂಗ್ರೆಸ್ ಎಷ್ಟು ಸತ್ಯಹರಿಶ್ಚಂದ್ರರೆಂದು ನೋಡಿಕೊಳ್ಳಲಿ, ಬೊಮ್ಮಾಯಿ ಸಿಎಂ ಆದಾಗಿನಿಂದ ಅಪಪ್ರಚಾರ ಮಾಡಲಾಗುತ್ತಿದೆ. 15 ಗಂಟೆ ಕೆಲಸ ಮಾಡಿ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರು.