ಬೆಂಗಳೂರು : ಕೆಲ ದಿನಗಳ ಹಿಂದೆ ದೇಶಾದ್ಯಂತ ಪಿಎಫ್ ಐ(PFI), ಎಸ್ ಡಿಪಿಐ (SDPI) ಸಂಘಟನೆಗಳ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದ್ದ ಎನ್ ಐಎ (NIA) ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಎನ್ ಐಎ ದಾಳಿ ವೇಳೆ ಪತ್ತೆಯಾದ ಪ್ರಮುಖವಾದ ಡೈರಿಯೊಂದರಲ್ಲಿ ಸಿಕ್ಕ ಪ್ರಮುಖ ಅಂಶಗಳ ಆಧಾರದ ಮೇಲೆ ಇಂದು ರಾಜ್ಯಾದ್ಯಂತ ಪೊಲೀಸರು ದಾಳಿ ಮಾಡಿದ್ದು, ಹಲವು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಪಿಎಫ್ ಐ ಸಂಘಟನೆಯ ಡೈರಿ ಎಂದು ಹೇಳಲಾಗುತ್ತಿರುವ `TRAING TO BE ORGANIZED’ ಎಂಬ ಬರಹ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಪೊಲೀಸರು ಪಿಎಫ್ ಸಂಘಟನೆಯ ಮುಖಂಡರ ಮನೆಗಳ ಮೇಲೆ ದಾಳಿ 40 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಾಗಿದೆ.
ಪತ್ತೆಯಾಗಿರುವ ಉಗ್ರ ಡೈರಿಯಲ್ಲಿ `TRAING TO BE ORGANIZED’ ಬರಹ ಇದ್ದು, ಡೈರಿಯಲ್ಲಿ ಸ್ಥಳ ಹಾಗೂ ದಿನಾಂಕದ ಬಗ್ಗೆ ಉಲ್ಲೇಖ ಮಾಡಿಲ್ಲ. ಈ ಐನಾತಿಗಳು ಎಲ್ಲಿ ಟ್ರೈನಿಂಗ್ ಮಾಡಿದ್ರು?ಯಾರೆಲ್ಲಾ ತರಬೇತಿಯಲ್ಲಿ ಭಾಗಿಯಾಗಲು ರೆಡಿಯಾಗಿದ್ರು? ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆಗಿಳಿದಿದ್ದಾರೆ.
Rain In Karnataka: ನವರಾತ್ರಿಯ ಸಂಭ್ರಮದ ನಡುವೆಯೇ ಮತ್ತೆ ರಾಜ್ಯಕ್ಕೆ ಮಳೆ ಎಂಟ್ರಿ: ಮುಂದಿನ 3 ದಿನ ಭಾರೀ ಮಳೆ