ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್ ಗಳು ಮತ್ತು ಗ್ರೌಂಡ್ ಸಿಬ್ಬಂದಿಯ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ನಡುವೆ ಅರುಣಾಚಲ ಪ್ರದೇಶ-ಅಸ್ಸಾಂನ ಪೂರ್ವ ವಲಯದಲ್ಲಿ ಮಹಿಳೆಯರು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ಮುನ್ನಡೆಸುತ್ತಿದ್ದಾರೆ.
ಮಹಿಳಾ ಪೈಲಟ್ಗಳು ಮತ್ತು ಗ್ರೌಂಡ್ ಸಿಬ್ಬಂದಿ ಅಧಿಕಾರಿಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ ಎಂದು ಈಸ್ಟರ್ನ್ ಕಮಾಂಡ್ನಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ ಸೆಕ್ಟರ್ ನಿಂದ ಹಿಡಿದು ಅರುಣಾಚಲ ಪ್ರದೇಶದ ವಿಜಯನಗರದವರೆಗೆ, ಮಹಿಳಾ ಪೈಲಟ್ ಗಳು ಸಹ ಸೈನಿಕರೊಂದಿಗೆ ಸ್ಥಳೀಯರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಎಸ್ಯು-30 ಎಂಕೆಐ ಫೈಟರ್ ಜೆಟ್ ಫ್ಲೀಟ್ನ ಭಾರತದ ಮೊದಲ ಶಸ್ತ್ರಾಸ್ತ್ರ ವ್ಯವಸ್ಥೆಯ ಆಪರೇಟರ್ ಫ್ಲೈಟ್ ಲೆಫ್ಟಿನೆಂಟ್ ತೇಜಸ್ವಿ ಅವರು ಮಹಿಳಾ ಹಾರಾಟದ ಬಗ್ಗೆ ವಿವರಿಸಿದ್ದು ನಾವು ದೇಶ ಸೇವೆಯ ಮಾಡುವ ಕನಸಿನ ಜೊತೆಗೆ ಹೆಜ್ಜೆಹಾಕುತ್ತುತ್ತಿದ್ದೇವೆ ಅಂತ ಹೇಳಿದ್ದಾರೆ. ಫ್ಲೈಟ್ ಲೆಫ್ಟಿನೆಂಟ್ ತೇಜಸ್ವಿ ಮಾತನಾಡಿ, “ಯುದ್ಧ ವಿಮಾನಗಳಲ್ಲಿ ಮಹಿಳೆಯರನ್ನು ಹೊಂದಿರುವುದು ಇನ್ನು ಮುಂದೆ ಹೊಸದೇನಲ್ಲ. ಪುರುಷರು ಮತ್ತು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಸಮಾನವಾಗಿ ಮುನ್ನೆಡಿಸುತ್ತಾರೆ ಅಂತ ಹೇಳಿದ್ದಾರೆ.
ಫೈಟರ್ ಸ್ಟ್ರೀಮ್ ಸೇರಲು ಮಹಿಳೆಯರಿಗೆ ಅನುಮತಿ : ಅವನಿ ಚತುರ್ವೇದಿ ಮತ್ತು ಭಾವನಾ ಕಾಂತ್ ಸೇರಿದಂತೆ ಮೂವರು ಮಹಿಳೆಯರನ್ನು ಫೈಟರ್ ಸ್ಟ್ರೀಮ್ಗೆ ನಿಯೋಜಿಸಿದಾಗ ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಮಹಿಳೆಯರಿಗೆ ಫೈಟರ್ ಸ್ಟ್ರೀಮ್ಗೆ ಪ್ರವೇಶಿಸಲು ಅವಕಾಶ ನೀಡಿತು. ಇದಾದ ಸ್ವಲ್ಪ ಸಮಯದ ನಂತರ, ಮಿಗ್ -21 ನಲ್ಲಿ ಏಕಾಂಗಿಯಾಗಿ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಕಾಂತ್ ಪಾತ್ರರಾದರು. ಕೆಲವು ದಿನಗಳ ನಂತರ, ಶಿವಾಂಗಿ ಸಿಂಗ್ ರಫೇಲ್ ವಿಮಾನವನ್ನು ಹಾರಿಸುವ ಮಹಿಳಾ ಪೈಲಟ್ ಆದರು.
BIGG NEWS : ʻ ಸಿದ್ದರಾಮಯ್ಯನವರು ವಿಪಕ್ಷ ನಾಯಕರಂತೆ ವರ್ತಿಸಲಿ ʼ : ಮಾಜಿ ಸಿಎಂ ಯಡಿಯೂರಪ್ಪ ಕಿಡಿ