ದೆಹಲಿ: ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳಿಂದ (POPSKs) ಆನ್ಲೈನ್ ಮೂಲಕ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ಗಳಿಗೆ (PCCs) ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ (MEA) ಹೇಳಿಕೆ ತಿಳಿಸಿದೆ.
ಭಾರತೀಯ ಅಂಚೆ ಇಲಾಖೆಯ ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ ಪಿಸಿಸಿ ಅಪ್ಲಿಕೇಶನ್ ಸೌಲಭ್ಯವನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಸೆಪ್ಟೆಂಬರ್ 28 ರಿಂದ ಅಂದ್ರೆ, ಬುಧವಾರದಿಂದ ಎಲ್ಲಾ ಪಿಒಪಿಎಸ್ಕೆಗಳಲ್ಲಿ ಇದು ಲಭ್ಯವಿರುತ್ತದೆ ಎಂದು ಎಂಇಎ ತಿಳಿಸಿದೆ
“28 ಸೆಪ್ಟೆಂಬರ್ 2022 ಬುಧವಾರದಿಂದ ಪ್ರಾರಂಭವಾಗುವ ಭಾರತದಾದ್ಯಂತ ಎಲ್ಲಾ ಆನ್ಲೈನ್ POPSK ಗಳಲ್ಲಿ PCC ಸೇವೆಗಳಿಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಸೇರಿಸಲು ಸಚಿವಾಲಯವು ನಿರ್ಧರಿಸಿದೆ. ಈ PCC ಅಪ್ಲಿಕೇಶನ್ ಸೌಲಭ್ಯವನ್ನು POPSK ಗಳಿಗೆ ವಿಸ್ತರಿಸುವಲ್ಲಿ ಸಚಿವಾಲಯವು ತೆಗೆದುಕೊಂಡ ಕ್ರಮವು ವಿದೇಶದಲ್ಲಿ ಉದ್ಯೋಗವನ್ನು ಬಯಸುವ ಭಾರತೀಯ ನಾಗರಿಕರಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಶಿಕ್ಷಣ, ದೀರ್ಘಾವಧಿಯ ವೀಸಾ, ವಲಸೆ ಇತ್ಯಾದಿಗಳಂತಹ ಇತರ PCC ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸುತ್ತದೆ” ಎಂದು ಹೇಳಿಕೆ ತಿಳಿಸಿದೆ.
BIG NEWS: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಸಿಬಿಐ ಪ್ರಕರಣ ರದ್ದುಕೋರಿ ಹೈಕೋರ್ಟ್ಗೆ ಡಿಕೆ ಶಿವಕುಮಾರ್ ಅರ್ಜಿ
BIGG NEWS : 3,673 ಪೌರ ಕಾರ್ಮಿಕರ ಕಾಯಂ : ನೇಮಕಾತಿಗೆ ಕರಡು ಅಧಿಸೂಚನೆ ಪ್ರಕಟ