ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.
ಇಲ್ಲಿನ ಪಂಚಗಢದಲ್ಲಿ ಭಾನುವಾರ ದೋಣಿ ಮುಳುಗಿ ಹಲವರು ಸಾವನ್ನಪ್ಪಿದ್ದರು. ಇದೀಗ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಇನ್ನೂ, ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಮೃತಪಟ್ಟವರಲ್ಲಿ 25 ಮಹಿಳೆಯರು ಮತ್ತು 13 ಮಕ್ಕಳು ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಾಲಯ ಅಮಾವಾಸ್ಯೆ ಆಚರಿಸಲು ಬೋದೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
ಬಾಂಗ್ಲಾದೇಶದಲ್ಲಿ ದೋಣಿ ಅಪಘಾತಗಳಲ್ಲಿ ಪ್ರತಿವರ್ಷ ನೂರಾರು ಜನರು ಸಾಯುತ್ತಾರೆ. ಇದು ತಗ್ಗು ಪ್ರದೇಶದ ವ್ಯಾಪಕವಾದ ಒಳನಾಡಿನ ಜಲಮಾರ್ಗಗಳನ್ನು ಹೊಂದಿದ್ದು, ಯಾವುದೇ ಸುರಕ್ಷತಾ ಮಾನದಂಡಗಳನ್ನು ಹೊಂದಿಲ್ಲ ಎನ್ನಲಾಗುತ್ತಿದೆ.
BREAKING NEWS : ಇಂದು ಜಪಾನ್ ಮಾಜಿ ಪಿಎಂ ʻಶಿಂಜೋ ಅಬೆʼ ಅಂತಿಮ ಸಂಸ್ಕಾರ: ಟೋಕಿಯೊ ತಲುಪಿದ ಪ್ರಧಾನಿ ಮೋದಿ
BIGG NEWS : ಜಿಪಂ, ತಾಪಂ. ಕ್ಷೇತ್ರ ವಿಂಗಡಣೆಗೆ ರಾಜ್ಯ ಸರ್ಕಾರಕ್ಕೆ 12 ವಾರ ಗಡುವು ನೀಡಿದ ಹೈಕೋರ್ಟ್
ಸಾರ್ವಜನಿಕರೇ ಗಮನಿಸಿ : ತಾಂತ್ರಿಕ ದೋಷ ನಿವಾರಣೆ : ಸಹಜ ಸ್ಥಿತಿಗೆ ಮರಳಿದ `108 ಆ್ಯಂಬುಲೆನ್ಸ್’ ಸೇವೆ