ಟೋಕಿಯೊ (ಜಪಾನ್): ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ಗುಂಡಿನ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ(Shinzo Abe) ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ಟೋಕಿಯೊಗೆ ಆಗಮಿಸಿದ್ದಾರೆ.
ಓಸಾಕಾದ ಪೂರ್ವದಲ್ಲಿ ಜುಲೈ 8 ರಂದು ನಾರಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11:30 ಕ್ಕೆ ಅಬೆ ಅವರು ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅಂದು ಸಂಜೆ ಸಂಜೆ 5:03 ಕ್ಕೆ ಅಬೆ ನಿಧನರಾದರು ಎಂದು ಘೋಷಿಸಲಾಯಿತು.
ಅಬೆಗೆ ಶ್ರದ್ಧಾಂಜಲಿ ಸಲ್ಲಿಸಲು ಜಪಾನ್ ದೇಶಕ್ಕೆ ಆಗಮಿಸಿದ ಬಗ್ಗೆ ಪ್ರಧಾನಿ ಮೋದಿ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
Landed in Tokyo. pic.twitter.com/8L4VNNVOUL
— Narendra Modi (@narendramodi) September 26, 2022
ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಗೆ ವಿದೇಶಿ ಗಣ್ಯರಿಗೆ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿರುವ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ವಿಧಿಸಿದ್ದು, ಹಲವಾರು ವಿದೇಶಿ ಗಣ್ಯರು ಭಾಗವಹಿಸಲಿದ್ದಾರೆ.
BIGG NEWS : `BPL’ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಆಹಾರ ಇಲಾಖೆಯಿಂದ ಮುಖ್ಯ ಮಾಹಿತಿ
BIGG NEWS : ಶಿಕ್ಷಕರ ನೇಮಕಾತಿ ಹಗರಣ : ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಸೇರಿ 6 ಜನರ ಬಂಧನ
BIGG NEWS : ಶಿಕ್ಷಕರ ನೇಮಕಾತಿ ಹಗರಣ : ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಸೇರಿ 6 ಜನರ ಬಂಧನ