ಬೆಂಗಳೂರು : ವಿಧಾನಸೌಧಕ್ಕೆ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಹಿನ್ನೆಲೆ ವಿಧಾನಸೌಧದದ ಸಿಬ್ಬಂದಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಧಾನಸೌಧದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಹಿನ್ನೆಲೆ ವಿಧಾನಸೌಧದದ ಸಿಬ್ಬಂದಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭದ್ರತಾ ದೃಷ್ಟಿಯಿಂದ ವಿಧಾನಸೌಧದ ನಾಲ್ಕು ವಿಭಾಗಗಳಾದ ಡಿಪಿಎಆರ್, ಆರ್ಥಿಕ, ಒಳಾಡಳಿತ ಹಾಗೂ ಕಾನೂನು ಹಾಗೂ ಸಂಸದೀಯ ವ್ಯವಹಾರ ಇಲಾಖೆಗಳಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಇಂದು ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
‘ದಸರಾ ರಜೆ’ಯ ಪ್ರವಾಸಕ್ಕೆ ತೆರಳೋರಿಗೆ ಗುಡ್ ನ್ಯೂಸ್: KSRTCಯಿಂದ ಶೇ.10ರಷ್ಟು ರಿಯಾಯಿತಿ, ವಿಶೇಷ ಬಸ್ ವ್ಯವಸ್ಥೆ