ನವದೆಹಲಿ : ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅದ್ರಂತೆ, ಜೆಪಿ ನಡ್ಡಾ ಅವರ ಅಧಿಕಾರಾವಧಿಯು 20 ಜನವರಿ 2023ರಂದು ಕೊನೆಗೊಳ್ಳಲಿದ್ದು, ಸಧ್ಯ ನಡ್ಡಾರನ್ನ ಅಧ್ಯಕ್ಷರಾಗಿ 2ನೇ ಅವಧಿಗೆ ಮುಂದುವರೆಸುವಂತೆ ಬಿಜೆಪಿ ಆದೇಶ ಹೊರಡಿಸಿದೆ.
ಅಂದ್ಹಾಗೆ, ಮೊದಲ ಏಳು ತಿಂಗಳು ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದರು. ಇದರ ನಂತ್ರ 20 ಜನವರಿ 2020ರಂದು ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡರು. ಅದರಂತೆ, ಅವರ ಮೂರು ವರ್ಷಗಳು 20 ಜನವರಿ 2023ರಂದು ಪೂರ್ಣಗೊಳ್ಳುತ್ತಿವೆ. ಆದ್ರೆ, 2ನೇ ಅವಧಿಗೆ ಪಕ್ಷದ ರಾಷ್ಟ್ರೀಯಾ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಮುಂದುವರೆಸುವಂತೆ ಬಿಜೆಪಿ ಆದೇಶ ಹೊರಡಿಸಿದೆ.
ಕ್ಲೀನ್ ಇಮೇಜ್ಗೆ ಹೆಸರುವಾಸಿ ಜೆಪಿ ನಡ್ಡಾ.!
ಇದಲ್ಲದೆ, ಅವರು ಆರ್ಎಸ್ಎಸ್ಗೆ ಆಪ್ತರು ಎಂದು ಪರಿಗಣಿಸಲಾಗಿದ್ದು, ಅವ್ರು ಕೇಂದ್ರದಲ್ಲಿ ಮಾತ್ರವಲ್ಲದೇ ಹಿಮಾಚಲ ಪ್ರದೇಶದಲ್ಲಿಯೂ ಸಚಿವರಾಗಿದ್ದರು. 1998 ರಿಂದ 2003ರವರೆಗೆ ಅವರು ಹಿಮಾಚಲ ಪ್ರದೇಶದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಇದರ ನಂತರ, ಅವರು 2008 ರಿಂದ 2010ರವರೆಗೆ ಧುಮಾಲ್ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. 2012ರಲ್ಲಿ ಅವರು ಮೊದಲ ಬಾರಿಗೆ ರಾಜ್ಯಸಭೆಯ ಸದಸ್ಯರಾದರು. ಮೋದಿ ಸರ್ಕಾರದಲ್ಲಿ ಅವರು ಆರೋಗ್ಯ ಸಚಿವಾಲಯದ ಜವಾಬ್ದಾರಿಯನ್ನ ವಹಿಸಿಕೊಂಡರು.