ತುಮಕೂರು: ಜಿಲ್ಲೆಯಲ್ಲಿ ರೈತರ ಮೇಲೆ ಪೊಲೀಸರ ದರ್ಪ ತೋರಿದ್ದಾರೆ. ರೈತರು ಕಣ್ಣೀರು ಹಾಕಿದ್ರೂ ಕೂಡ ಪೊಲೀಸರು ಕರುಣೆನೇ ತೋರಿಸಲಿಲ್ಲ. ಜಿಲ್ಲೆಯ ಪಂಡಿತನಹಳ್ಳಿ ಮೀಸಲು ಅರಣ್ಯ , ಒತ್ತುವರಿ ರೈತರು ಮಾಡಿಕೊಂಡಿದ್ದಾರೆ ಎಂದು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾಗಿದ್ದಾರೆ.
BIGG NEWS: ಮಂಡ್ಯದಲ್ಲೂ ಶುರುವಾಯ್ತು PAY MLA & PAY ಎಕ್ಸ್ ಎಂಎಲ್ ಎ ಅಭಿಯಾನ
ಜೆಸಿಬಿ ಮೂಲಕ ಅನ್ನದಾತರು ಬೆಳೆದ ಹೊಲದಲ್ಲಿ ರಾಗಿ, ಚೆಂಡುಹೂ , ಎಲೆಕೋಸ್ ಅನ್ನು ತೆರವುಗೊಳಿಸಿದ್ದಾರೆ. ಸುಮಾರು ೧೧ ಲಕ್ಷ ಮೌಲ್ಯದ ಎಲೆಕೋಸ್ ಮಣ್ಣುಪಾಲಾಗಿದೆ. ಇದರಿಂದಾಗಿ ರೈತರು ಬೆಳೆದ ಬೆಳೆ ನಾಶವಾಗಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಆದ್ರೂ ಕೂಡ ಅಧಿಕಾರಿಗಳು ಮತ್ತು ಪೊಲೀಸರು ಅಯ್ಯೋ ಅನ್ನದೆ ತೆರೆವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಇದೀಗ ಬೆಳೆದ ಬೆಳೆ ನಾಶಕ್ಕೆ ರೈತರು ಕಂಗಾಲಾಗಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.