ಶಿವಮೊಗ್ಗ : ಅಡಕೆ ಬೆಳೆಗಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಅಡಿಕೆ ಧಾರಣೆ ಒಂದೇ ವಾರದ ಅವಧಿಯಲ್ಲಿ ಸುಮಾರು 10 ರಿಂದ 12 ಸಾವಿರ ರೂ.ಗಳಷ್ಟು ಕುಸಿತಗೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕಳೆದ ಎರಡು ವಾರಗಳ ಹಿಂದೆ ಕ್ವಿಂಟಾಲ್ ರಾಶಿ ಅಡಿಕೆ ಧಾರಣೆ 57,000 ರೂ.ಗಳಿಂದ 58,500 ರೂ.ಗಳ ಆಸುಪಾಸಿನಲ್ಲಿತ್ತು. ಇದೀಗ 46,000 ರೂ. ಗಳಿಂದ 47,500 ರೂ.ಆಸುಪಾಸಿಗೆ ಕುಸಿತ ಕಂಡಿದೆ. ಈ ಮೂಲಕ ಒಂದೇ ವಾರದಲ್ಲಿ ಅಡಕೆ ಬೆಲೆಯಲ್ಲಿ 10 ಸಾವಿರ ರೂ.ಗಳಷ್ಟು ಇಳಿಕೆಯಾಗಿರುವುದು ಅಡಕೆ ಬೆಳೆಗಾರರಿಗೆ ಆತಂಕ ಹೆಚ್ಚಿಸಿದೆ.
ಅಡಿಕೆ ಧಾರಣೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಆತಂಕದಿಂದ ಬೆಳೆಗಾರರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಆದರೆ ಈ ಬಾರಿ ಮಳೆಯಾಗಿರುವ ಕಾರಣ ಇಳುವರಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.