* ರಂಜಿತ್ ಶೃಂಗೇರಿ
ಬೆಂಗಳೂರು: ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್ಗೆ ನಿಗದಿ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹೇಶ್ ಆರ್ ಆದೇಶ ಹೊರಡಿಸಿದ್ದು, ನಾಡಗೀತೆಯನ್ನು ಹಾಡಲು ಶ್ರೀ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ನಾಡಗೀತೆಯ ಪೂರ್ಣಪಾಠವನ್ನು ಬಳಸಬೇಕು ಹಾಗೂ ಯಾವುದೇ ಆಲಾಪವಿಲ್ಲದೇ , ಪುನರಾವರ್ತನೇ ಇಲ್ಲದೇ ಎರಡು ನಿಮಿಷ ಮೂವತ್ತು ಸೆಕೆಂಡುಗಳಲ್ಲಿ ( 2.30 ನಿಮಿಷಗಳಲ್ಲಿ ) ಹಾಡಲು ಆದೇಶಿಸಿದೆ.
ರಾಜ್ಯಾದ್ಯಂತ ನಿರ್ಧಿಷ್ಟ ಧಾಟಿಯಲ್ಲಿ ಸೀಮಿತವಧಿಯಲ್ಲಿ ಜನಸಾಮಾನ್ಯರೂ ಕೂಡ ಹಾಡಲು ಅನುಕೂಲವಾಗುವಂತೆ ಪರಿಶೀಲಿಸಲು, ಸಾಹಿತಿಗಳು ಹಾಗೂ ಸುಗಮ ಸಂಗೀತ ಕ್ಷೇತ್ರದ ಕಲಾವಿದರನ್ನೊಳಗೊಂಡಂತೆ , ಪ್ರಸಿದ್ದ ಗಾಯಕಿ ವಿದ್ವಾನ್ ಶ್ರೀಮತಿ ಹೆಚ್ ಆರ್ ಲೀಲಾವತಿ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿರುತ್ತದೆ.
ಅಂತೆಯೇ ನಾಡಗೀತೆ ಹಾಡುವಾಗ ಅನುಸರಿಸಬೇಕಾದ ರಾಗ ಸಂಯೋಜನೆಯ ಧಾಟಿ ಹಾಗೂ ಕಾಲಾವಧಿಯನ್ನು ನಿರ್ಧರಿಸಿ ಸದರಿ ಸಮಿತಿಯು ದಿನಾಂಕ 16:09:2021 ರಂದು ವರದಿ ಸಲ್ಲಿಸಿರುತ್ತದೆ. ಅದರಂತೆ ಸದರಿ ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರ ಈ ಆದೇಶ ಹೊರಡಿಸಿದೆ.
BIGG NEWS : ಭಾರತಕ್ಕೆ 5G ಬಂದ ನಂತ್ರ ‘4G ಫೋನ್’ ನಿಷ್ಪ್ರಯೋಜಕವಾಗುತ್ವಾ.? ತಜ್ಞರು ಹೇಳೋದೇನು ಗೊತ್ತಾ?