ಕೆಎನ್ ಎನ್ ಡಿಜಿಟಲ್ ಡೆಸ್ಕ್ : ತಿರುಪತಿ ತಿಮ್ಮಪ್ಪ’ನ ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿ ಖುಷಿ ಸುದ್ದಿ ನೀಡಿದ್ದು, ವೆಂಕಟೇಶ್ವರನ ದರ್ಶನ ಈಗ ಇನ್ನಷ್ಟು ಸುಲಭ ಮಾಡಿದೆ.
ಹೌದು, ವಿಐಪಿಗಳ ದರ್ಶನದ ಸಮಯವನ್ನು ಬೆಳಗ್ಗೆ 5.30ರ ಬದಲಾಗಿ 10ಕ್ಕೆ ಆರಂಭಿಸಲು ಟಿಟಿಡಿ ನಿರ್ಧಾರ ಕೈಗೊಂಡಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ. ಇದಕ್ಕೂ ಮುನ್ನ ವಿಐಪಿಗಳು ಬೆಳಗ್ಗೆ 8 ಅಥವಾ 9 ಗಂಟೆಯವರೆಗೆ ದೇವರ ದರ್ಶನ ಪಡೆಯುತ್ತಿದ್ದರು. ಈ ನಿಯಮದಿಂದ ಜನಸಾಮಾನ್ಯರು ದರ್ಶನ ಪಡೆಯಲು ಸಮಸ್ಯೆ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ ದೇವಾಲಯದ ಆಡಳಿತ ಮಂಡಳಿ ಸಮಯವನ್ನು ಬದಲಾವಣೆ ಮಾಡಿದೆ. ಈ ಬಗ್ಗೆ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಮಾಹಿತಿ ನೀಡಿದ್ದಾರೆ,
ಅಕ್ಟೋಬರ್ ತಿಂಗಳಿನಿಂದ ತಿರುಪತಿಯಲ್ಲಿ ಹೊಸ ನಿಯಮ ಜಾರಿಗೆ ಬರಲಿದ್ದು,ವಿಐಪಿ ದರ್ಶನದ ಸಮಯವನ್ನು ಬದಲಾಯಿಸುವ ಮೂಲಕ ಸಾಮಾನ್ಯ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಳ್ಳಲು ಟಿಟಿಡಿ ನಿರ್ಧರಿಸಿದೆ. ಅದೇ ರೀತಿ ಭಕ್ತಾದಿಗಳಿಗೆ ವಸತಿ ಸೌಲಭ್ಯವನ್ನು ಹಂಚಿಕೆ ಮಾಡುವ ವ್ಯವಸ್ಥೆಯನ್ನು ತಿರುಮಲದಿಂದ ತಿರುಪತಿಗೆ ಸ್ಥಳಾಂತರಿಸಲಿದೆ. ಅಕ್ಟೋಬರ್ ನಂತರದ ದಿನಗಳಲ್ಲಿ ಭಕ್ತರು ಈ ಸೌಲಭ್ಯ ಬಳಸಬಹುದಾಗಿದೆ.
BREAKING NEWS: ಬೆಂಗಳೂರಿನ ಭೂಗತಲೋಕದ ಮಾಜಿ ಡಾನ್ ‘ಚಕ್ರವರ್ತಿ ಕ್ರಿಸ್ಟೋಫರ್’ಗೆ ಬ್ರೈನ್ ಸ್ಟ್ರೋಕ್, ಸ್ಥಿತಿ ಗಂಭೀರ