ಮೈಸೂರು : ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕೆಸರೆರಚಾಟ ಜೋರಾಗಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಿದ್ದು, ಪೇ ಸಿಎಂ ಪೋಸ್ಟರ್ ಅಭಿಯಾನವನ್ನೇ ಶುರು ಮಾಡಿದೆ
ಸದ್ಯ ಈ ವಿಚಾರದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಭಾವನಾತ್ಮಕ ಮಾತುಗಳಿಂದಲೇ ಕಾಂಗ್ರೆಸ್ ನಾಯಕರನ್ನು ತಿವಿದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದವರು ‘ನೀವು ಎಷ್ಟು ಅಪಮಾನ ಮಾಡ್ತೀರೋ ಅಷ್ಟು ನನ್ನ ವಿಶ್ವಾಸ ಹೆಚ್ಚುತ್ತದೆ, ಅದು ನನಗೆ ಬಲ ನೀಡುತ್ತದೆ. ನಾನು ಎಲ್ಲಾ ಟೀಕೆಗಳನ್ನು ಸವಾಲಾಗಿ ಇಟ್ಟುಕೊಂಡು ಜನಪರ ಕೆಲಸ ಮಾಡುತ್ತೇನೆ’ ಎಂದು ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ನಾಯಕರ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಇಲ್ಲ, ಅರ್ಜುನ ಹಾಗೂ ಕರ್ಣನಿಗೆ ಎರಡು ತರಹದ ವ್ಯಕ್ತಿತ್ವ ಇರುತ್ತದೆ, ಅದೇನೆಂದರೆ ಅರ್ಜುನನಿಗೆ ಹೊಗಳಬೇಕು ಆಗ ಗುರಿ ಇಟ್ಟು ಬಾಣ ಹೊಡೆಯುತ್ತಾನೆ. ಆದರೆ ಕರ್ಣ ಹಾಗಲ್ಲ, ಕರ್ಣನಿಗೆ ಹೊಗಳುವ ಅಗತ್ಯ ಇಲ್ಲ. ಕರ್ಣನಿಗೆ ನಿನ್ನ ಕೈಯ್ಯಲ್ಲಿ ಆಗಲ್ಲ ಅಂದಾಗಲೇ ಅರ್ಜುನನಿಗಿಂತ ಹೆಚ್ಚು ಗುರಿ ಇಟ್ಟು ಹೊಡೆಯುತ್ತಾನೆ. ನಾನು ಕರ್ಣನ ತರಹ ಎರಡನೇ ಪಂಥಕ್ಕೆ ಸೇರಿದವನು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಸಿಎಂ ಟಾಂಗ್ ನೀಡಿದರು.
SM Krishna Health: ಹಿರಿಯ ನಾಯಕ ಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ – CM ಬೊಮ್ಮಾಯಿ ಸ್ಪಷ್ಟನೆ