ಸಿನಿಮಾ ಡೆಸ್ಕ್ : ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಇದೀಗ ಪ್ರಾರಂಭವಾಗಿದೆ. ಸ್ಯಾಂಡಲ್ ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೆ ತಮ್ಮ ಖಡಕ್ ಲುಕ್ ನಲ್ಲಿ ನಿರೂಪಣೆಗೆ ಸಜ್ಜಾಗಿದ್ದು, ಜನಪ್ರಿಯ ಟಿವಿ ಶೋ ಬಿಗ್ ಬಾಸ್ ಮೂಲಕ ಮತ್ತೆ ಟಿವಿ ಪರದೆ ಮೇಲೆ ಮಿಂಚಲು ಬರುತ್ತಿದ್ದಾರೆ.
ಸದ್ಯ, 18 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ರಾಯಲ್ ಎಂಟ್ರಿ ಕೊ ಟ್ಟಿದ್ದು, ಬಿಗ್ ಬಾಸ್ ಅಸಲಿ ಆಟ ಪ್ರಾರಂಭವಾಗಿದೆ.
ಬಿಗ್ ಬಾಸ್ ಮನೆ ಪ್ರವೇಶಿಸಿದ 18 ಮಂದಿ ಸ್ಪರ್ಧಿಗಳು
1) ಬಿಗ್ ಬಾಸ್ ಸೀಸನ್ 1 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ನಟಅರುಣ್ ಸಾಗರ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
2) ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ಮಯೂರಿ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
3) ಸಿನಿಮಾಗಳ ಬಗ್ಗೆ ಡಿಫರೆಂಟ್ ಆಗಿ ರಿವ್ಯೂ ಕೊಟ್ಟು ಸಖತ್ ಸದ್ದು ಮಾಡಿರುವ ನವಾಝ್ ದೊಡ್ಮನೆ ಪ್ರವೇಶಿಸಿದ್ದಾರೆ.
4) ದಿವ್ಯಾ ಉರುಡುಗ ಕೂಡ ಈ ಬಾರಿ ಮತ್ತೆ ಬಿಗ್ ಬಾಸ್ ಗೆ ಬಂದಿದ್ದಾರೆ.
5) ಕಿರುತೆರೆ ನಟಿ ದೀಪಿಕಾ ದಾಸ್ ಕೂಡ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
6) ಕಿರುತರೆ ನಟ , ಉದ್ಯಮಿ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
7) ಪ್ರಶಾಂತ್ ಸಂಬರ್ಗಿ ಕೂಡ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
8) ಕಮಲಿ ಧಾರಾವಾಹಿಯ ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಗೆ ಬಂದಿದ್ದಾರೆ.
9) ಕಿರುತೆರೆ ಕಾಮಿಡಿ ಶೋ ಮೂಲಕ ಮನೆ ಮಾತಾದ ವಿನೋದ್ ಗೊಬ್ಬರಗಲ ದೊಡ್ಮನೆ ಪ್ರವೇಶಿಸಿದ್ದಾರೆ.
10) ಸೀರಿಯಲ್ ಹಾಗೂ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ನಟಿ ನೇಹಾ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
11) ಬಿಗ್ಬಾಸ್ ಒಟಿಟಿ ಖ್ಯಾತಿಯ ಸಾನ್ಯ ಅಯ್ಯರ್ ಈಗ ಬಿಗ್ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿದ್ದಾರೆ.
12) ರೂಪೇಶ್ ಶೆಟ್ಟಿ ಬಿಗ್ಬಾಸ್ ಒಟಿಟಿಯಲ್ಲಿ ಚೆನ್ನಾಗಿ ಆಡಿದ್ದರು. ಈಗ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸುತ್ತಿದ್ದಾರೆ.
13) ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಈಗ ಬಿಗ್ಬಾಸ್ ಮನೆಯೊಳಗೆ ಸೇರಿದ್ದಾರೆ.
14) ಆರ್ಯವರ್ಧನ್ ಗುರೂಜಿ ಈಗ ದೊಡ್ಮನೆ ಪ್ರವೇಶಿಸಿದ್ದು, ಯಾವ ರೀತಿ ರಂಜಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
15) ಕಿರುತೆರೆ ನಟಿ ಕಾವ್ಯಶ್ರೀ ಗೌಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.
16) ಅಕ್ಕ ಧಾರಾವಾಹಿ ಮೂಲಕ ಮನೆ ಮಾತಾದ ಹಾಗೂ ನಿರೂಪಕಿಯಾಗಿ ಗಮನ ಸೆಳೆದ ನಟಿ ಅನುಪಮಾ ಗೌಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
17) ರಾಕೇಶ್ ಅಡಿಗ ಅವರು ಬಿಗ್ ಬಾಸ್ ಒಟಿಟಿಯಿಂದ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
18) ಲೇಡಿ ಬೈಕರ್. ಸೂಪರ್ ಆಗಿ ರೇಸಿಂಗ್ ಮಾಡುವ ಐಶ್ವರ್ಯಾ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಸೆಪ್ಟೆಂಬರ್ 24ರಂದು ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಗ್ರ್ಯಾಂಡ್ ಓಪನಿಂಗ್ ನಡೆದಿದ್ದು, ಈ ಬಾರಿಯ ಸೀಸನ್ ಪ್ರೇಕ್ಷಕರನ್ನು ಎಷ್ಟು ಮೋಡಿ ಮಾಡುತ್ತೆ, ಯಾವ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.