ಮಹಾರಾಷ್ಟ್ರ: ಮಹಾರಾಷ್ಟ್ರದ ನಾಂದೇಡ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಾಂದೇಡ್-ಕಿನ್ವಾಟ್ ರಾಷ್ಟ್ರೀಯ ಹೆದ್ದಾರಿಯ ಸೋನಾರಿಫಾಟಾ ಕಾರಂಜಿ ಬಳಿ ಶನಿವಾರ ಸಿಮೆಂಟ್ ಲೋಡ್ ಸಾಗಿಸುತ್ತಿದ್ದ ಟ್ರಕ್ಗೆ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಹಿಮಾಯತ್ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಮತ್ತು ಗಾಯಗೊಂಡವರೆಲ್ಲರೂ ಬಿಹಾರ ಮೂಲದವರಾಗಿದ್ದು, ರೈಲ್ವೆ ಕಾಮಗಾರಿಗಾಗಿ ಬಿಹಾರದಿಂದ ನಾಂದೇಡ್ಗೆ ಬಂದಿದ್ದರು ಎನ್ನಲಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಅವರು ಐಚರ್ ಟೆಂಪೋದಲ್ಲಿನ ತಮ್ಮ ನಿವಾಸಕ್ಕೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
BIG NEWS : ಭಾರತದಲ್ಲಿ 5G ಸೇವೆಗೆ ಅ. 1ರಂದು ಪ್ರಧಾನಿ ಮೋದಿ ಚಾಲನೆ | 5G services
ತಮಿಳುನಾಡಿನಲ್ಲಿ RSS ಸದಸ್ಯನ ಮನೆಗೆ ಪೆಟ್ರೋಲ್ ಬಾಂಬ್ ಎಸೆದು ಎಸ್ಕೇಪ್ ಆದ ಅಪರಿಚಿತರು… ವಿಡಿಯೋ