ತಮಿಳುನಾಡು: ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸದಸ್ಯನ ಮನೆಗೆ ಮೂರು ಪೆಟ್ರೋಲ್ ಬಾಂಬ್ಗಳನ್ನು ಎಸೆದಿರುವ ಘಟನೆ ನಡೆದಿದೆ.
ಶನಿವಾರ ಸಂಜೆ 7:38 ರ ಸುಮಾರಿಗೆ ಮಧುರೈನ ಮೆಲ್ ಅನುಪ್ಪನಾಡಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ಎಂಎಸ್ ಕೃಷ್ಣನ್ ಅವರ ನಿವಾಸಕ್ಕೆ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್ಗಳನ್ನು ಎಸೆದು ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
#WATCH | Tamil Nadu: Three petrol bombs were thrown and we are investigating in this regard. No one was injured and damaged in the accident: Shanmugam, Assistant Commissioner on petrol bomb hurled at the house of an RSS member in Madurai
(CCTV Visual Source: Local Police) pic.twitter.com/qxOBjGmg3y
— ANI (@ANI) September 24, 2022
ವಿಡಿಯೋದಲ್ಲಿ, ಕೃಷ್ಣನ್ ಅವರ ನಿವಾಸದ ಬಳಿಗೆ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್ಗಳನ್ನು ಎಸೆದು ಪರಾರಿಯಾಗುವುದನ್ನು ನೋಡಬಹುದು.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ಆರೆಸ್ಸೆಸ್ ಸದಸ್ಯರ ಮನೆಯ ಮೇಲೆ ಮೂರು ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ. ನಾವು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ” ಎಂದು ಷಣ್ಮುಗಂ ಮಧುರೈ ಸೌತ್ನ ಸಹಾಯಕ ಕಮಿಷನರ್ ತಿಳಿಸಿದ್ದಾರೆ.
BIGG NEWS : ವಿದೇಶಗಳಿಂದ `PFI’ ಗೆ 120 ಕೋಟಿ ರೂ. ಅಕ್ರಮ ಹಣ : ಸ್ಪೋಟಕ ಮಾಹಿತಿ ಪತ್ತೆ ಹಚ್ಚಿದ ಇಡಿ!
BIG NEWS : ಭಾರತದಲ್ಲಿ 5G ಸೇವೆಗೆ ಅ. 1ರಂದು ಪ್ರಧಾನಿ ಮೋದಿ ಚಾಲನೆ | 5G services
BIGG NEWS : ಕರ್ತವ್ಯನಿರತ ಚಾಲಕ ವಿಶ್ರಾಂತಿಯಲ್ಲಿ ಮೃತಪಟ್ಟರೂ ವಿಮೆ : ಹೈಕೋರ್ಟ್ ಮಹತ್ವದ ಆದೇಶ