ಹುಬ್ಬಳ್ಳಿ : ಪಿಎಫ್ ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ತಂಡ ದಾಳಿ ಮಾಡಿದ್ದ ವೇಳೆ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಿಎಫ್ ಐ ಕಚೇರಿಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ್ದವರ ವಿರುದ್ಧ ಹುಬ್ಬಳ್ಳಿ ಕಮರಿಪೇಟೆ ಠಾಣೆ ಪಿಎಸ್ಐ ದೂರಿನನ್ವಯ 51 ಜನರ ವಿರುದ್ಧ ಕೇಸ್ ದಾಖಲಾಗಿದೆ. 2 ದಿನಗಳ ಹಿಂದೆ ಪಿಎಫ್ಐ ಕಾರ್ಯಕರ್ತರು ಪಿಎಫ್ ಐ ಧ್ವಜ ಹಿಡಿದು ಕೌಲ್ಪೇಟೆ ಬಳಿ ಪ್ರತಿಭಟನೆ ಮಾಡಿದ್ದರು. ಅನುಮತಿ ಪಡೆಯದೆ ಪ್ರತಿಭಟನೆ ಹಿನ್ನೆಲೆ ಹುಬ್ಬಳ್ಳಿಯ ಕಮರಿಪೇಟೆ ಠಾಣೆಯಲ್ಲಿ ಸೆಕ್ಷನ್ 143, 145, 341,149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
BREAKING NEWS : `ಪೇ ಸಿಎಂ’ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮ : ಸಿಎಂ ಬೊಮ್ಮಾಯಿ
ಕಳೆದ ಎರಡು ದಿನಗಳ ಹಿಂದೆ ದೇಶದ 15 ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದ ಎನ್ಐಎ, PFI ವಿರುದ್ಧದ ಇದುವರೆಗಿನ ಅತೀ ದೊಡ್ಡ ದಾಳಿ ಇದಾಗಿದೆ. ಸುಮಾರು 106 ಪಿಎಫ್ಐ ಮುಖಂಡರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದೆ.