ದಾವಣಗೆರೆ: ಜಿಲ್ಲೆಯ ಎಮ್ಮನಬೇತೂರು ಗ್ರಾಮದಲ್ಲಿ ದಲಿತ ಕುಟುಂಬಗಳು ಸ್ಮಶಾನಕ್ಕೆ ಜಾಗ ಕೊಡದಿದ್ದಕ್ಕೆ ರೊಚ್ಚಿಗೆದ್ದು ಗ್ರಾಮ ಪಂಚಾಯತ್ ಮುಂದೆಯೇ ಗುಂಡಿ ತೋಡಿದ್ದಾರೆ. ಮುಂದೆ ಯಾರಾದರೂ ಸಾವನ್ನಪ್ಪಿದರೆ ಅವರು ತೋಡಿದ ಗುಂಡಿಯಲ್ಲೇ ಅಂತ್ಯಕ್ರಿಯೆ ನಡೆಸಲು ಸಜ್ಜಾಗಿದ್ದಾರೆ.
BIG NEWS: ರಾಯಚೂರಿನಲ್ಲಿ ಪರ್ಸೆಂಟೇಜ್ ಫಿಕ್ಸ್ ಮಾಡಿದ್ದ ಪಿಡಿಓ ಅಮಾನತು
ಸ್ಮಶಾನಕ್ಕೆ ಸ್ಥಳವಿಲ್ಲದೇ ಅಂತ್ಯಸಂಸ್ಕಾರ ನೆರವೇರಿಸಲು ಸಮಸ್ಯೆ ಎದುರಿಸುತ್ತಿರುವ ಗ್ರಾಮದ ದಲಿತ ಕುಟುಂಬಗಳು ಜಿಲ್ಲಾಧಿಕಾರಿ ಸೇರಿದಂತೆ ಹತ್ತಾರು ಕಡೆ ಮನವಿ ಸಲ್ಲಿಸಿದ್ದಾರೆ. ಆದರೆ ಮನವಿಗೆ ಯಾವುದೇ ಅಧಿಕಾರಿ ಸ್ಪಂದಿಸದ ಹಿನ್ನೆಲೆ ವಿನೂತನ ಹೋರಾಟಕ್ಕೆ ದಲಿತ ಕುಟುಂಬಗಳು ಇಳಿದಿವೆ. ಅದರಂತೆ ಗ್ರಾಮ ಪಂಚಾಯತ್ ಮುಂದೆಯೇ ಮೃತದೇಹ ಹೂಳುವ ಗುಂಡಿ ತೋಡಿ ಅದರಲ್ಲೇ ಮುಂದೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿವೆ. ಈ ವೇಳೆ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಸವಂತಪ್ಪ ಹಾಗೂ ಗ್ರಾಮದ ಪ್ರಮುಖರು ಸೇರಿ ಸ್ಮಶಾನಕ್ಕೆ ಜಮೀನು ನೀಡುವ ಬಗ್ಗೆ ಭರವಸೆ ನೀಡಿದರು.