ಮಂಡ್ಯ: ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂಬ ಸಂಸದ ಸುಮಲತಾ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ , ಮಂಡ್ಯ, ರಾಮನಗರ ಜಿಲ್ಲೆಯ ಯಾರೇ ಬಂದು ಹೇಳಿದರೂ ಕೆಲಸ ಮಾಡಿಕೊಡುತ್ತೇನೆ. ಅವೈಜ್ಞಾನಿಕದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
BIG NEWS: ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್; ಬಸ್ ಪ್ರಯಾಣ ದರ ಹೆಚ್ಚಳವಿಲ್ಲ- ಶ್ರೀರಾಮುಲು
ನಾನು ಇಂಜಿನಿಯರ್ ಅಲ್ಲ. ನಾನು ಓದಿದ್ದು ಜರ್ನಲಿಸಂ, ಇಂಜಿನಿಯರಿಂಗ್ ಅಲ್ಲ. ಬೇರೆಯವರಿಗೆ ಏನೋ ಅವೈಜ್ಞಾನಿಕ ಅನಿಸಿರಬಹುದು. ಆದರೆ ಈಗ ರಸ್ತೆಯಲ್ಲಿ ಜನ ಓಡಾಡುತ್ತಿದ್ದಾರೆ. ಓಡಾಡುತ್ತಿರುವವರೆಲ್ಲರೂ ರಸ್ತೆ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಸುಮಲತಾ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇನ್ನು ಪೇ ಸಿಎಂ ಕಾಂಗ್ರೆಸ್ ಅಭಿಯಾನ ವಿಚಾರವಾಗಿ ಮಾತನಾಡಿ, ಪೇ ಸಿಎಂ ಅಂದರೆ ಪೇ ಕಾಂಗ್ರೆಸ್ ಮೇಡಂ ಅಂತ ಕಾಂಗ್ರೆಸ್ನವರೇ ಪ್ರೂವ್ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
BIG NEWS: ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್; ಬಸ್ ಪ್ರಯಾಣ ದರ ಹೆಚ್ಚಳವಿಲ್ಲ- ಶ್ರೀರಾಮುಲು
ಪೇ ಸಿಎಂ ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ. ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊಡೆದಾಡಬೇಕು. ನಾನು ಜಾಸ್ತಿ ಅಭಿವೃದ್ಧಿ ಕೆಲಸ ಮಾಡುತ್ತೇನೆ, ನಾನು ಜಾಸ್ತಿ ಮಾಡುತ್ತೇನೆ ಎಂಬ ಹಠ ಇರಬೇಕು. ಅದನ್ನು ಬಿಟ್ಟು ಜಾತಿ-ಜಾತಿ ಎತ್ತಿಕಟ್ಟುವುದು, ಇನ್ನೊಬ್ಬರನ್ನು ಅವಾಚ್ಯ ಶಬ್ದದಿಂದ ನಿಂದಿಸುವುದು. ಪರಸ್ಪರ ವೈಯಕ್ತಿಕ ನಿಂದನೆ ಮಾಡಿಕೊಳ್ಳುವುದು, ಇದೆಲ್ಲಾ ಹಳೆ ಕಾಲದಿಂದ ನಡೆದುಕೊಂಡು ಬಂದಿರುವ ರಾಜಕಾರಣ ಎಂದು ಕಿಡಿಕಾರಿದ್ದಾರೆ.