ಶಿವಮೊಗ್ಗ : ಶಿವಮೊಗ್ಗದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರ ಗುರಿ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವುದಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಸ್ಪೋಟಕ ಮಾಹಿತಿ ತಿಳಿಸಿದ್ದಾರೆ.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 1673 ಎಸ್ ಬಿಐ ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತ ಒಕ್ಕೂಟ ವ್ಯವಸ್ಥೆಯನ್ನು ಬದಲು ಮಾಡಬೇಕೆಂಬ ಮನಸ್ಥಿತಿಗೆ ಬಂದಿದ್ದ ಶಂಕಿತ ಉಗ್ರರು ಇದಕ್ಕೆ ಐಸಿಸ್ ಒಂದೇ ಪರಿಹಾರ ಎಂದುಕೊಂಡು ಐಸಿಸ್ ಜೊತೆಗೆ ಸಂಪರ್ಕ ಸಾಧಿಸಿದ್ದರು. ಬಂಧಿತರು ತಮ್ಮ ಮೊಬೈಲ್ ಗಳಲ್ಲಿ ಟೆಲಿಗ್ರಾಂ ಆ್ಯಪ್ ಹೊಂದಿದ್ದರು. ಈ ಆ್ಯಪ್ ನಲ್ಲಿ ಇಸ್ಲಾಮಿಕ್ ಸ್ಟೆಟ್ ನ ಅಧಿಕೃತ ಮಾಧ್ಯಮವಾದ ಅಲ್-ಹಯತ್ ನ ಟೆಲಿಗ್ರಾಂ ಚಾನಲ್ ನ ಸದಸ್ಯರಾಗಿದ್ದರು ಎಂದು ತಿಳಿಸಿದ್ದಾರೆ.
BIGG NEWS : `SSLC’ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮ ಪಾಲನೆ ಕಡ್ಡಾಯ
ಎಂಜಿನಿಯರ್ ಸೈಯದ್ ಯಾಸಿನ್ (21), ಎಂಜಿನಿಯರಿಂಗ್ ವಿದ್ಯಾರ್ಥಿ ಮಾಜ್ ಮುನೀರ್ ಅಹ್ಮದ್ (22) ಮತ್ತು ಶಾರೀಕ್ (24) ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಸೆಪ್ಟೆಂಬರ್ 19 ರಂದು ಪ್ರಕರಣ ದಾಖಲಿಸಲಾಗಿದೆ. ಶಾರೀಕ್ ತಲೆಮರೆಸಿಕೊಂಡಿದ್ದು, ಉಳಿದ ಇಬ್ಬರನ್ನು ಬಂಧಿಸಲಾಗಿದೆ.