ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (Karnataka Electricity Regulatory Commission – KRRC) ರಾಜ್ಯದಲ್ಲಿ ವಿದ್ಯುತ್ ದರಗಳನ್ನು ಹೆಚ್ಚಿಸಲು ಮುಂದಾಗಿದೆ ಎಲ್ಲವು ಅಂದುಕೊಂಡತೆ ಆದ್ರೆ ಇದೇ ಆಕ್ಟೋಬರ್ 1ರಿಂದ ನೂತನ ದರಗಳು ಜಾರಿಗೆ ಬರಲಿದೆ.
ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ), ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಜೆಸ್ಕಾಂ). ಈ ವಿಭಾಗಗಳ ವಿದ್ಯುತ್ ಬೆಲೆ ಹೆಚ್ಚಳಕ್ಕೆ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.ಅಕ್ಟೋಬರ್ 2022 ರಿಂದ ಮಾರ್ಚ್ 2023 ರವರೆಗೆ ನೂತನ ನಿಯಮ ಜಾರಿಯಲ್ಲಿದೆ ಅಂತ ಆದೇಶದಲ್ಲಿ ತಿಳಿಸಲಾಗಿದೆ.
- ಬೆಸ್ಕಾಂ ವಲಯದಲ್ಲಿ ಪ್ರತಿ ಯೂನಿಟ್ಗೆ 43 ಪೈಸೆ
- ಮೆಸ್ಕಾ ವಲಯದಲ್ಲಿ ಪ್ರತಿ ಯೂನಿಟ್ಗೆ 24 ಪೈಸೆ
- ಸಿಇಎಸ್ಸಿ ವಲಯದಲ್ಲಿ ಪ್ರತಿ ಯೂನಿಟ್ಗೆ 34 ಪೈಸೆ
- ಹೆಸ್ಕಾ ವಲಯದಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ
- ಜೆಸ್ಕಾಂ ವಲಯದಲ್ಲಿ ಪ್ರತಿ 35 ಯೂನಿಟ್ಗೆ
ಮೇಲ್ಕಂಡತೆ ನಿಗದಿ ಮಾಡಿ ಆದೇಶವನ್ನು ಹೊರಡಿಸಿದೆ.