ಕೆಎನ್ಎನ್ ಡಿಜಿಟಲ್ ಡೆಸ್ಕ್ : ಶಾಲೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ನಡೆದ ಹಲವು ಸಂಭಾಷಣೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿವೆ. ಕೆಲವು ಮಕ್ಕಳು ತಪ್ಪು ಮಾಡಿದ ನಂತ್ರ ಕ್ಷಮೆಯಾಚಿಸುವುದು ಕಂಡುಬಂದರೆ, ಕೆಲವರು ತಮ್ಮ ಶಿಕ್ಷಕರಿಗೆ ಬೆದರಿಕೆ ಹಾಕೋದನ್ನ ಕಾಣಬೋದು. ಅದ್ರಂತೆ, ಸಧ್ಯ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದು, ಕೆಲವೇ ಸೆಕೆಂಡುಗಳ ಈ ದೃಶ್ಯ ನೀಡಿ ಜನ ಶಾಕ್ ಆಗ್ತಿದ್ದಾರೆ.
ಶಿಕ್ಷಕಿಗೆ ಅವಾಜ್ ಹಾಕಿದ ಮಗು
ಎರಡು ಗುಂಪುಗಳು ಅಥವಾ ಯುವಕರ ನಡುವೆ ಜಗಳವಾದಾಗ, ಹೊಡೆದಾಟದ ಸಮಯದಲ್ಲಿ ಬೆದರಿಕೆಗಳು ಕೇಳಿಬರುತ್ತವೆ, ಆದರೆ ನೀವು ಇದನ್ನ ಚಿಕ್ಕ ಮಗುವಿನಿಂದ ಕೇಳಿದರೆ, ನೀವು ಸ್ವಲ್ಪ ಸಮಯದವರೆಗೆ ಶಾಕ್ ಆಗ್ತೀರಾ. ಈ ವೀಡಿಯೊದಲ್ಲಿ ಇದೇ ರೀತಿಯದ್ದನ್ನ ನೋಡಬೋದು, ಇದರಲ್ಲಿ ಚಿಕ್ಕ ಮಗು ಶಾಲೆಯ ತರಗತಿಯಲ್ಲಿದ್ದು ಅಳುತ್ತಿರುವುದು ಕಂಡುಬಂದಿದೆ. ಶಿಕ್ಷಕಿಗೆ ನನ್ನ ತಂದೆ ಪೊಲೀಸರಲ್ಲಿದ್ದಾರೆ ಎಂದು ಹೇಳಿದರು. ಇದಕ್ಕೆ ಶಿಕ್ಷಕಿಯೂ, ನಿಮ್ಮ ತಂದೆ ಪೊಲೀಸರಲ್ಲಿದ್ದರೆ ಏನು? ಅಂತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪುಟ್ಟ ಪೋರ, ಶೂಟ್ ಮಾಡಿ ಸಾಯಿಸ್ತಾರೆ ಅಂತಾ ಬೆದರಿಸುತ್ತಾನೆ.
ಸಧ್ಯ ವೀಡಿಯೊದ ಕೊನೆಯಲ್ಲಿ ವೀಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗ್ತಿದ್ದು, Twitter ನಲ್ಲಿ ‘ನನ್ನ ತಂದೆ ಪೊಲೀಸರಲ್ಲಿದ್ದಾರೆ’ ಎನ್ನುವ ಶೀರ್ಷಿಕೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಬರೆಯಲಾಗಿದೆ. ಈ ವೀಡಿಯೊವನ್ನು ಇಂಟರ್ನೆಟ್ನಲ್ಲಿ 55 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ 2300ಕ್ಕೂ ಹೆಚ್ಚು ಲೈಕ್ಗಳು ಮತ್ತು ನೂರಾರು ಟ್ವೀಟ್ಗಳನ್ನ ಗಳಿಸಿದೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
मेरा पापा पुलिस में है 😅 pic.twitter.com/8najIWSeIE
— ज़िन्दगी गुलज़ार है ! (@Gulzar_sahab) September 20, 2022