ಕೆಎನ್ಎನ್ ಡಿಜಿಟಲ್ ಡೆಸ್ಕ್ : ಯುಎಸ್ ನಲ್ಲಿ ವ್ಯಕ್ತಿಯೊಬ್ಬರು ಐದು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಮೂಗಿಗೆ ಹಾಕಿದ್ದ ಉಂಗುರ ಪತ್ತೆಯಾಗಿದೆ. ಇದರಲ್ಲೇನು ವಿಶೇಷ ಅಂತೀರಾ, ಉಂಗುರ ಸಿಕ್ಕಿರುವುದು ಎಲ್ಲಿ ಅಂತ ನೀವು ತಿಳಿದ್ರೆ ಆಶ್ಚರ್ಯ ಪಡೋದಂತು ಖಂಡಿತಾ.
BIGG NEWS : IPL-2023 ಹರಾಜಿಗೆ ಡೇಟ್ ಫಿಕ್ಸ್ ; ಈ ದಿನಾಂಕದಂದು ನಡೆಯಲಿದೆ Auction
ಸುಮಾರು 35 ವರ್ಷದ ಜೋಯ್ ಲಿಕಿನ್ಸ್ ಎಂಬುವವರು ಫ್ಯಾಷನ್ ಗಾಗಿ ಮೂಗಿಗೆ ಉಂಗುರವನ್ನು ಹಾಕಿಸಿಕೊಂಡಿದ್ದರು. ಕಳೆದ 5 ವರ್ಷಗಳ ಹಿಂದೆ ಅದು ಕಳೆದು ಹೋಗಿತ್ತು. ಎಲ್ಲೋ ಮಲಗಿರುವಾಗ ಉಂಗುರ ಬಿದ್ದು ಹೋಗಿದೆ ಅಂತ ಅವರು ಸುಮ್ಮನಾಗಿದ್ದರು.
ಆದರೆ ಒಂದು ರಾತ್ರಿ, ಕೆಮ್ಮುತ್ತಾ ಎಚ್ಚರಗೊಂಡರು. ಆ ದಿನ ತುಂಬಾ ಕೆಮ್ಮುತ್ತಿದ್ದರು. ಇದರ ಜೊತೆಗೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಉಸಿರಾಡಲು ತೊಂದರೆ ಅನುಭವಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತು.
ಅಲ್ಲಿ ಪರಿಶೀಲಿಸಿದ ವೈದ್ಯರು, ಆರಂಭದಲ್ಲಿ ಇವು ನ್ಯುಮೋನಿಯಾದ ಎಚ್ಚರಿಕೆ ಚಿಹ್ನೆಗಳು ಎಂದು ಭಾವಿಸಿದ್ದರು. ಆದರೆ ಫಲಿತಾಂಶಗಳು ಅವರ ಶ್ವಾಸಕೋಶದ ಮೇಲಿನ ಎಡ ಹಾಲೆಯೊಳಗೆ 0.6 ಇಂಚಿನ ಉಂಗುರ ಹುದುಗಿರುವ ಎಕ್ಸ್-ರೇ ಅನ್ನು ನೋಡಿ ವ್ಯಕ್ತಿ ಆಘಾತಗೊಂಡಿದ್ದರು.
View this post on Instagram
ಹುದುಗಿರುವ 0.6 ಇಂಚಿನ ಮೂಗಿನ ಉಂಗುರವನ್ನು ತೋರಿಸಿದ ನಂತರ ಎಕ್ಸ್-ರೇ ಅವರನ್ನು ಆಘಾತಗೊಳಿಸಿತು.
ಈ ಕುರಿತಂತೆ ಜೋಯ್ ಲಿಕಿನ್ಸ್ ಅವರು ಇಸ್ಟಾಗ್ರಾಮ್ ನಲ್ಲಿ ಶ್ವಾಸಕೋಶದಲ್ಲಿ ಮೂಗಿನ ಉಂಗುರ ಿರುವ ಎಕ್ಸ್-ರೇ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ.
ನಾನು ಅದನ್ನು ಸ್ಮರಣಿಕೆಯಾಗಿ ಇಟ್ಟುಕೊಂಡಿದ್ದೇನೆ, ನಾನು ಅದನ್ನು ಮತ್ತೆ ಧರಿಸುವುದಿಲ್ಲ” ಎಂದು ಅವರು ಮೆಟ್ರೋದಿಂದ ಉಲ್ಲೇಖಿಸಿದ್ದಾರೆ.
‘ಮೈಸೂರು ದಸರಾ ಹಬ್ಬ’ಕ್ಕೆ KSRTCಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ವಿಶೇಷ ಟೂರ್ ಪ್ಯಾಕೇಜ್’ ಬಿಡುಗಡೆ