ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಂತ ಕೈ ನಾಯಕರು ಇಂದು ಪೇ ಸಿಎಂ ಪೋಸ್ಟರ್ ಗಳನ್ನು ( Pay CM Poster ) ನಗರದ ಕ್ವೀನ್ಸ್ ರಸ್ತೆಯ ಗೋಡೆಗಳ ಮೇಲೆ ಅಂಟಿಸಿ ಪ್ರತಿಭಟನೆ ನಡೆಸಿದರು. ಹೀಗೆ ಪೋಸ್ಟರ್ ಅಂಟಿಸೋ ಅಭಿಯಾನದಲ್ಲಿ ತೊಡಗಿದ್ದಂತ ಕಾಂಗ್ರೆಸ್ ನಾಯಕರನ್ನು ( Congress Leader ) ಪೊಲೀಸರು ವಶಕ್ಕೆ ಪಡೆದು, ಬಿಎಂಟಿಸಿ ಬಸ್ ( BMTC Bus ) ಮೂಲಕ ಕರೆದೊಯ್ಯೋದಕ್ಕೆ ಆರಂಭಿಸಿದ ವೇಳೆಯಲ್ಲಿಯೇ, ಬಿಎಂಟಿಸಿ ಬಸ್ ಗೆ ಬ್ರೇಕ್ ಇಲ್ಲ. ಕೆಳಗೆ ಇಳಿದು ಬೇರೆ ಬಸ್ ನಲ್ಲಿ ಕರೆದೊಯ್ಯುವಂತೆ ಡ್ರೈವರ್ ಸೂಚಿಸಿದ ಘಟನೆಯೂ ನಡೆದಿದೆ.
BMS ಶಿಕ್ಷಣ ಟ್ರಸ್ಟ್ ಅಕ್ರಮ: ಪ್ರಧಾನಿ ಮೋದಿಗೆ ದೂರು ನೀಡಲು ನಿರ್ಧಾರ – ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ
ಇಂದು ಕೆಪಿಸಿಸಿ ಕಚೇರಿಯ ಕ್ವೀನ್ಸ್ ರಸ್ತೆಯಲ್ಲಿ ಸಿಎಲ್ ಪಿ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪೇ ಸಿಎಂ ಪೋಸ್ಟರ್ ಅಂಟಿಸೋ ಅಭಿಯಾನ ನಡೆಸಿದರು. ಕಾಂಗ್ರೆಸ್ ಕಚೇರಿಯಿಂದ ಜಾಥಾ ಮೂಲಕ ಸಾಗಿದಂತ ಕೈ ನಾಯಕರು ರಸ್ತೆಯ ಇಕ್ಕೆಲಗಳ ಗೋಡೆಗಳ ಮೇಲೆ ಪೇ ಸಿಎಂ ಪೋಸ್ಟರ್ ಅಂಟಿಸಿದರು.
ಕಾಂಗ್ರೆಸ್ ನಾಯಕರನ್ನು ಅರ್ಧಕ್ಕೆ ತಡೆದಂತ ಪೊಲೀಸರು, ಮಾಜಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ಎಂ.ಬಿ ಪಾಟೀಲ್, ಹೆಚ್ ಕೆ ಪಾಟೀಲ್, ಜಾರ್ಜ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು. ಈ ಬಳಿಕ ಬಿಎಂಟಿಸಿ ಬಸ್ ನಲ್ಲಿ ಕರೆದೊಯ್ಯೋದಕ್ಕೆ ಬಸ್ ಹತ್ತಿಸಿದರು.
BIG BREAKING NEWS: ಮುರುಘಾ ಶ್ರೀಗಳಿಗೆ ಬಿಗ್ ಶಾಕ್: ಜಾಮೀನು ಅರ್ಜಿ ತಿರಸ್ಕಾರ | Murugha Sri
ಆದ್ರೇ.. ಬಿಎಂಟಿಸಿ ಬಸ್ ಹತ್ತಿದಂತ ಕಾಂಗ್ರೆಸ್ ನಾಯಕರಿಗೆ ಬಿಎಂಟಿಸಿ ಬಸ್ ಡ್ರೈವರ್ ಬಸ್ ಗೆ ಬ್ರೇಕ್ ಇಲ್ಲ. ಕೆಳಗೆ ಇಳಿಯುವಂತೆ ಮನವಿ ಮಾಡಿದ್ದಾರೆ. ಆಗ ಕೈ ನಾಯಕರು ಬ್ರೇಕ್ ಇಲ್ಲದ ಸರ್ಕಾರದ ಭ್ರಷ್ಟಾಚಾರಕ್ಕೆ ದಿಕ್ಕಾರ ಎಂಬುದಾಗಿ ಧಿಕ್ಕಾರವನ್ನು ಕೂಗಿ ಕೆಳಗಿಳಿದು, ಬೇರೊಂದು ಬಸ್ ನಲ್ಲಿ ತೆರಳಿದ್ದಾರೆ. ಈ ಮೂಲಕ ಬ್ರೇಕ್ ಇಲ್ಲದ ಬಸ್ ಹತ್ತಿದ್ದರಿಂದ ಮುಂದಾಗಲಿದ್ದಂತ ಅನಾಹುತ ನೆನೆದು ಶಾಕ್ ಕೂಡ ಆಗಿದ್ದಾರೆ.